ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಖತ್ ಸದ್ದು ಮಾಡ್ತಿದೆ ಸಂಜನಾಳ 6 ವರ್ಷದ ಹಿಂದಿನ ಇಸ್ಟಾ ಪೋಸ್ಟ್‌

ಬೆಂಗಳೂರು: ನಟಿ ಸಂಜನಾ 2018ರಲ್ಲೇ ಲವ್​ ಜಿಹಾದ್​ಗೆ ಸಿಲುಕಿ ಮತಾಂತರವಾಗಿದ್ದಾರೆ. ಅವರ ಹೆಸರು ಸಂಜನಾ ಅಲ್ಲ ಮಹಿರಾ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಈಗಾಗಲೇ ಹೇಳಿದ್ದಾರೆ. ಇದಕ್ಕೆ ಪೂರಕ ದಾಖಲೆಯೊಂದು ಸಹ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು. 2014ರ ಜುಲೈ 7ರಂದು ಸಂಜನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಾಡಿರುವ ಪೋಸ್ಟ್​ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಸಂಜನಾ ಮುಸ್ಲಿಂ ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಯಾಮೆರಾಗೆ ಪೋಸ್​ ನೀಡಿರುವ ಕಪ್ಪು-ಬಿಳಿಪಿನ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಜೊತೆಗೆ "ಮಲಬಾರಿ ಮುಸ್ಲಿಂ ಲವ್​ ಸ್ಟೋರಿಯುಳ್ಳ ಚಿತ್ರದಲ್ಲಿ ನಟಿಸಿದ ಬಳಿಕ ನಾನು ಮುಸ್ಲಿಂ ಸಂಸ್ಕೃತಿ/ಸಂಪ್ರದಾಯಕ್ಕೆ ಪ್ರಭಾವಿತಳಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ ಸ್ಕ್ರೀನ್​ ಶಾಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Vijay Kumar
PublicNext

PublicNext

19/09/2020 05:57 pm

Cinque Terre

166.53 K

Cinque Terre

11