ಮುಂಬೈ: ಮುಂಬೈನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರೀತಿಯಲ್ಲಿ ಮತ್ತೋರ್ವ ನಟ ಅಕ್ಷತ್ ಉತ್ಕರ್ಷ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಬಿಹಾರದ ಮುಜಫರ್ ನಗರ ಸಮೀಪದ ಸಿಕಂದರಪುರ ನಾಲಾ ರಸ್ತೆಯ ನಿವಾಸಿಯಾಗಿದ್ದ ಅಕ್ಷತ್ ಉದ್ಯೋಗ ಅರಸಿ ಮುಂಬೈಗೆ ಬಂದಿದ್ದರು. ಕೆಲಸದ ಜೊತೆಯಲ್ಲಿ ಅಲ್ಬಂಗಳಲ್ಲಿಯೂ ಅಕ್ಷತ್ ಕಾಣಿಸಿಕೊಂಡಿದ್ದರು. ಮುಂಬೈನ ಸುರೇಶ್ ನಗರದಲ್ಲಿರುವ ಪಶ್ಚಿಮ ಅಂಧೇರಿಯ ಆರ್‌ಟಿಓ ಲೈನ್ ಕಟ್ಟಡದಲ್ಲಿ ಅಕ್ಷತ್ ವಾಸವಾಗಿದ್ದರು. ಅಕ್ಷತ್ ವಾಸವಾಗಿದ್ದ ಸ್ಥಳದ ಸ್ವಲ್ಪ ದೂರದಲ್ಲಿಯೇ ಗೆಳತಿ ಮತ್ತು ಗೆಳೆಯರು ವಾಸವಾಗಿದ್ದರು. ಸದ್ಯ ಅವರ ಮೇಲೆ ಅನುಮಾನ ವ್ಯಕ್ತವಾಗಿದೆ.
PublicNext
29/09/2020 05:02 pm