ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆತ್ಮಹತ್ಯೆಯೋ, ಕೊಲೆಯೋ?- ಇಂದು ಸುಶಾಂತ್ ಸಿಂಗ್ ಸಾವಿನ ಸೀಕ್ರೆಟ್ ರಿವೀಲ್!

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಿಗೂಢ ಸತ್ಯ ಇಂದು ಬಹಿರಂಗಗೊಳ್ಳಲಿದೆ. ವೈದ್ಯಕೀಯ ಪರೀಕ್ಷೆ ನಡೆಸಿರುವ ಏಮ್ಸ್ ವೈದ್ಯರ ತಂಡವು ಮಹತ್ವದ ವರದಿಯನ್ನು ನೀಡಲಿದೆ.

ಸುಶಾಂತ್ ಸಿಂಗ್ ಸಾವಿಗೆ ಆತ್ಮಹತ್ಯೆ ಕಾರಣವೋ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎನ್ನುವ ಬಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆ ತಜ್ಞರು ಸ್ಪಷ್ಟನೆ ನೀಡಲಿದ್ದಾರೆ. ಹಿರಿಯ ವೈದ್ಯ ಡಾ.ಸುಧೀರ್ ಗುಪ್ತ ನೇತೃತ್ವದ ಏಮ್ಸ್ ವೈದ್ಯರ ತಂಡ ಇಂದು ಸಭೆ ಸೇರಲಿದ್ದು, ಸುಶಾಂತ್ ಸಿಂಗ್ ನಿಗೂಢ ಸಾವು ಪ್ರಕರಣದಲ್ಲಿ ಈವರೆಗೆ ನಡೆಸಲಾದ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳ ವರದಿಗಳನ್ನು ಪರಿಶೀಲಿಸಿ ಈ ಬಗ್ಗೆ ಅಂತಿಮ ಅಭಿಪ್ರಾಯ ಪ್ರಕಟಿಸಲಿದ್ದಾರೆ. ಈ ವರದಿಯು ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆಗಳಿವೆ.

Edited By : Vijay Kumar
PublicNext

PublicNext

20/09/2020 09:11 am

Cinque Terre

72.36 K

Cinque Terre

3