ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ ಭಾಯ್‌ಜಾನ್ ಕುಟುಂಬಕ್ಕೂ ಕಂಟಕವಾಯ್ತಾ ಸುಶಾಂತ್ ಸಿಂಗ್ ಪ್ರಕರಣ?

ಮುಂಬೈ: ಬಾಲಿವುಡ್‌ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಸದ್ಯ ತನಿಖೆಯು ಡ್ರಗ್ಸ್‌ ಜಾಲದ ನಂಟಿನ ಹಿಂದೆ ಬಿದ್ದಿರುವುದು ಅನೇಕರಿಗೆ ಬೇಸರ ಮೂಡಿದೆ. ಈ ಮಧ್ಯೆ ಬಾಲಿವುಡ್ ಭಾಯ್‌ಜಾನ್ ನಟ ಸಲ್ಮಾನ್ ಖಾನ್ ಕುಟುಂಬಕ್ಕೂ ಸುಶಾಂತ್ ಸಿಂಗ್ ಪ್ರಕರಣ ಕಂಟಕವಾಯಿತೇ ಎಂಬ ಪ್ರಶ್ನೆ ಎದ್ದಿದೆ.

ಸುಶಾಂತ್​ ಹಾಗೂ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ​ಖಾನ್​ ಸಹೋದರ ಅರ್ಬಾಜ್​ ಖಾನ್​ ಲಿಂಕ್​ ಇದೆ ಎನ್ನುವ ರೀತಿಯಲ್ಲಿ ಕೆಲ ಪೋಸ್ಟ್​ಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಿಂದಾಗಿ ಕೋಪಗೊಂಡಿರುವ ಅರ್ಬಾಜ್​ ಖಾನ್, 'ನನ್ನ ಮಾನ ಹಾಳು ಮಾಡುತ್ತೀದ್ದೀರಿ' ಎಂದು ಮುಂಬೈನ ಸಿವಿಲ್​ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ವಿಭೋರ್ ಆನಂದ್, ಸಾಕ್ಷಿ ಭಂಡಾರಿ ಸೇರಿ ಕೆಲವರು ಸೆಪ್ಟೆಂಬರ್ 28ರಂದು ಅರ್ಬಾಜ್​ ಖಾನ್​ ಮತ್ತವರ ಕುಟುಂಬಕ್ಕೆ ಸಂಬಂಧಿಸಿದಂತೆ ಮಾನಹಾನಿ ಮಾಡುವ ಪೋಸ್ಟ್ ಪ್ರಕಟಿಸಿದ್ದರು. ಅರ್ಬಾಜ್​ ಕಡೆಯಿಂದ ಪ್ರಕರಣ ದಾಖಲಾಗುತ್ತಿದ್ದಂತೆ ಕೋರ್ಟ್, ಪೋಸ್ಟ್​ಗಳನ್ನು ಡಿಲಿಟ್ ಮಾಡುವಂತೆ ಆದೇಶಿಸಿದೆ.

Edited By : Vijay Kumar
PublicNext

PublicNext

29/09/2020 05:52 pm

Cinque Terre

41.49 K

Cinque Terre

0

ಸಂಬಂಧಿತ ಸುದ್ದಿ