ಮುಂಬೈ: ಸಿನಿ ರಂಗದಲ್ಲಿ ನಟನೆಯ ಜೊತೆಗೆ ನಾಯಕ ಹಾಗೂ ವಿಲನ್‌ಗಳಿಗೆ ಕಟ್ಟುಮಸ್ತಾದ ದೇಹ ಮುಖ್ಯವಾಗುತ್ತದೆ. ಹೀಗಾಗಿ ನಟ ಸೋನು ಸೂದ್ ಸಖತ್ ಆಗಿ ಬಾಡಿ ಬಿಲ್ಡ್ ಮಾಡಿದ್ದಾರೆ. ಅವರು ಬಾಡಿ ಬಿಲ್ಡಿಂಗ್ನಲ್ಲಿ ಸ್ಟಾರ್ ಹೀರೋಗಳನ್ನೇ ಹಿಂದಿಕ್ಕಿದ್ದಾರೆ.
47 ವರ್ಷದ ಸೋನು ಸೂದ್ ಅವರನ್ನು 12 ವರ್ಷ ಪುತ್ರ ಇಹ್ಸಾನ್ ಸೂದ್ ಮೀರಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಜಿಮ್ನಲ್ಲಿ ಭರ್ಜರಿ ವರ್ಕೌಟ್ ಮಾಡುತ್ತಾರೆ. ಇಹ್ಸಾನ್ ಸೂದ್ ಬಾಡಿ ಬಿಲ್ಡ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನು ನೋಡಿದ ನೆಟ್ಟಿಗರು ಇಹ್ಸಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
21/09/2020 07:10 pm