ಮುಂಬೈ: ಕೇಂದ್ರ ಸರ್ಕಾರದ ಹೊಸ ಕೃಷಿ ಮಸೂದೆಗೆ ದೇಶಾದ್ಯಂತ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ರೈತರು ಪ್ರತಿಭಟನೆ ಕೂಡಾ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಪಾಪ್ ತಾರೆ ರೆಹನಾ ಸೇರಿದಂತೆ ಅನೇಕ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ರೈತರ ಪರ ದನಿಯೆತ್ತಿ ಗಮನ ಸೆಳೆದಿದ್ದಾರೆ.
ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್ ಚಿತ್ರೀಕರಣಕ್ಕಾಗಿ ಗೊರೆಗಾಂವ್ ಫಿಲ್ಮ್ಸಿಟಿಗೆ ಆಗಮಿಸಿದ್ದ ವೇಳೆ ಸಲ್ಮಾನ್ ಖಾನ್ ರೈತರ ಬಗ್ಗೆ ಮಾತನಾಡಿದ್ದಾರೆ. “ನಾನೂ ಕೂಡಾ ರೈತರ ಪರ ಇದ್ದೇನೆ. ಏಕೆಂದರೆ ನಾನೂ ಕೂಡಾ ಬಿಡುವಿನ ವೇಳೆಯಲ್ಲಿ ವ್ಯವಸಾಯ ಮಾಡುತ್ತೇನೆ. ಸರಿಯಾದ ಕೆಲಸಗಳು ಸರಿಯಾದ ಸಮಯದಲ್ಲಿ ಆಗಬೇಕು. ಆಗ ಮಾತ್ರ ಎಲ್ಲರೂ ಚೆನ್ನಾಗಿರಲು ಸಾಧ್ಯ” ಎಂದು ಮಾತನಾಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ 4-5 ತಿಂಗಳ ಕಾಲ ತಮ್ಮ ತೋಟದ ಮನೆಯಲ್ಲೇ ಉಳಿದುಕೊಂಡಿದ್ದ ಸಲ್ಮಾನ್ ಖಾನ್ ಅಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.
PublicNext
05/02/2021 03:42 pm