ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಬಾಂಬ್​ ಸಿಡಿಸಿದ ಸಂಬರಗಿ- ನಾಳೆ ಮತ್ತಿಬ್ಬರು ಸ್ಟಾರ್​ ನಟರ ಡ್ರಗ್ಸ್​ ಬಂಡವಾಳ ಬಯಲು

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಮಾಫಿಯಾ ಬಿರುಗಾಳಿ ಎಬ್ಬಿಸಿದೆ. ಈ ಮಧ್ಯೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಮತ್ತೊಂದು ಬಾಂಬ್​ ಸಿಡಿಸಿದ್ದು, ಮತ್ಯಾರು ಪ್ರಕರಣದಲ್ಲಿ ಸಿಲುಕಲಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

'ನಾಳೆ-ನಾಡಿದ್ದು ಸ್ಟಾರ್ ನಟರ ಬಂಡವಾಳ ಹೊರ ಬರುತ್ತದೆ. ಶುಕ್ರವಾರ ಇಷ್ಟೊತ್ತಿಗೆ ಅವರ ಬಳಿ ಪೊಲೀಸರು ಇರುತ್ತಾರೆ. ದಾಖಲೆಗಳ ಸಮೇತ ನಾನೇ ನಾಳೆ ಕಂಪ್ಲೀಟ್ ಡೀಟೇಲ್ಸ್ ಹೇಳುತ್ತೇನೆ' ಎಂದು ಹೇಳಿದ್ದಾರೆ. ಈ ಹಿಂದೆ ಪ್ರಶಾಂತ್ ಸಂಬರಗಿ ಅವರು ಡ್ರಗ್ಸ್ ಪೆಡ್ಲರ್​ಗಳ ಜೊತೆ ನಟಿ ಸಂಜನಾ ಗಲ್ರಾನಿ ಸಂಪರ್ಕ ಹೊಂದಿದ್ದ ಬಗ್ಗೆ ಸಾಕಷ್ಟು ಫೋಟೋಗಳನ್ನು ಬಹಿರಂಗ ಪಡಿಸಿದ್ದರು. ಜೊತೆಗೆ ಶಾಸಕ ಜಮೀರ್ ಅಹ್ಮದ್​ ಅವರ ಆಪ್ತ ಶೇಖ್​ ಫಾಝಿಲ್​ನ ಕ್ಯಾಸಿನೋ ಪಾರ್ಟಿ ಬಗ್ಗೆಯೂ ಪ್ರಸ್ತಾಪಿಸಿದ್ದರು.

Edited By : Vijay Kumar
PublicNext

PublicNext

24/09/2020 04:24 pm

Cinque Terre

57.52 K

Cinque Terre

2