ನಟ ಸುದೀಪ್ ಇದೇ ಮೊದಲ ಬಾರಿ ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ. ಸದ್ಯ ಹೈದ್ರಾಬಾದ್ನಲ್ಲಿ ಶೂಟಿಂಗ್ ನಡೆಸುತ್ತಿರುವ ಕಿಚ್ಚ ಈ ವೇಳೆ ತೆಲುಗಿನ ಪವರ್ ಸ್ಟಾರ್ ಜೊತೆ ಮಾತುಕತೆ ನಡೆಸಿದ್ದಾರೆ.
ಈ ಭೇಟಿ ವೇಳೆ ಅವರು, ಗಿಡವನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಪವನ್ ಜೊತೆ ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳ ಕುರಿತು ಚರ್ಚೆ ಮಡಿದ ಸುದೀಪ್, ಕೋವಿಡ್ ಹಿನ್ನಲೆ ಸುದೀಪ್ ನಟನೆಯ ಪ್ಯಾಂಟಮ್' ಸಿನಿಮಾ ಮುನ್ನೆಚ್ಚರಿಕಾ ಕ್ರಮದೊಂದಿಗೆ ಹೈದ್ರಾಬಾದ್ನಲ್ಲಿ ಶೂಟಿಂಗ್ ನಡೆಸಿದೆ.
ಈ ವೇಳೆ ಅವರು ಪವನ್ ಅವರನ್ನು ಭೇಟಿಯಾಗಿದ್ದು, ಇದೊಂದು ಸೌಜನ್ಯಯುತ ಮಾತುಕತೆ ಅಷ್ಟೇ ಎಂದಿದ್ದಾರೆ. ಪವನ್ ಕಲ್ಯಾಣ್ ಅಣ್ಣ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟ ಸುದೀಪ್ ಕಾಣಿಸಿಕೊಂಡಿದ್ದರು.
ನಟನೆ ಜೊತೆಗೆ ಜನಾಸೇನಾ ಪಕ್ಷದ ಮೂಲಕ ಸಕ್ರಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಕೂಡ ಇವರಿಗೆ ಸಿನಿಮಾ ಆಫರ್ಗಳು ಬರುತ್ತಲೇ ಇವೆ.
PublicNext
06/10/2020 03:22 pm