ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಶ್ಯಪ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ- ನಟಿ ಪಾಯಲ್

ಮುಂಬೈ: ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಪಾಯಲ್ ಘೋಷ್ ಗಂಭೀರ ಆರೋಪ ಮಾಡಿದ್ದಾರೆ.

ಟ್ವೀಟ್ ಮೂಲಕ ಕಿಡಿಕಾರಿರುವ ನಟಿ ಪಾಯಲ್, "ಅನುರಾಗ್ ಕಶ್ಯಪ್ ನನ್ನೊಂದಿಗೆ ಬಲವಂತವಾಗಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ದಯವಿಟ್ಟು ಬೇಗ ಕ್ರಮಕೈಗೊಳ್ಳಿ. ಸೃಜನಶೀಲ ವ್ಯಕ್ತಿಯ ಹಿಂದಿನ ರಾಕ್ಷಸ ಗುಣವನ್ನು ದೇಶ ನೋಡಲಿ. ಇದರಿಂದ ನನಗೆ ಹಾನಿಯಾಗಬಹುದು ಎಂಬುದರ ಅರಿವು ಇದೆ. ನನ್ನ ಸುರಕ್ಷತೆಗೆ ಅಪಾಯವಿದೆ. ದಯವಿಟ್ಟು ಸಹಾಯ ಮಾಡಿ" ಎಂದು ಮನವಿ ಮಾಡಿಕೊಂಡಿದ್ದಾರೆ. ವಿಚಿತ್ರವೆಂದರೆ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಧಾನಿ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅನುರಾಗ್ ಕಶ್ಯಪ್, "ನನ್ನನ್ನು ಸುಮ್ಮನಿರಿಸುವ ಪ್ರಯತ್ನವನ್ನು ತುಂಬಾ ಸಮಯದ ಬಳಿಕ ಮಾಡುತ್ತಿದ್ದೀರಿ. ಇರಲಿ, ನನ್ನನ್ನು ಮೌನಗೊಳಿಸುವ ಪ್ರಯತ್ನದಲ್ಲಿ ನಿಮ್ಮ ಜೊತೆಗೆ ಹಲವು ಮಹಿಳೆಯರನ್ನು ಎಳೆದು ತಂದಿದ್ದೀರಿ. ಸ್ವಲ್ಪ ಮಿತಿ ಇರಲಿ, ಯಾವುದೇ ಆರೋಪ, ಏನೇ ಇರಲಿ ಇದೆಲ್ಲವೂ ಆಧಾರರಹಿತವಾಗಿವೆ" ಎಂದು ಹೇಳಿದ್ದಾರೆ.

ನಾನು ಅಸಭ್ಯವಾಗಿ ವರ್ತಿಸುವುದಿಲ್ಲ. ಅದನ್ನು ಸಹಿಸುವುದೂ ಇಲ್ಲ. ಏನಾಗುತ್ತದೆಯೋ ನೋಡೋಣ. ಈ ಆರೋಪ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ನಿಮ್ಮ ವಿಡಿಯೋದಲ್ಲೇ ಗೋಚರಿಸುತ್ತದೆ. ನನ್ನ ಮೇಲಿನ ನಿಮ್ಮ ಆಶೀರ್ವಾದ ಹಾಗೂ ಪ್ರೀತಿ ಹೀಗೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

20/09/2020 01:00 pm

Cinque Terre

89.22 K

Cinque Terre

2