ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಇದೇ ತಿಂಗಳ ಅಂತ್ಯಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಈ ಕುರಿತು ಸ್ವತಃ ಕಾಜಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಜಲ್ ಮದುವೆಯಾಗುತ್ತಿರುವ ಹುಡುಗ ಹಾಗೂ ವಿವಾಹದ ದಿನಾಂಕದ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆಯೇ ಅವರ ಅಭಿಮಾನಿಗಳು ಗೌತಮ್ ಬಗ್ಗೆ ತಿಳಿಯಲು ಆಸಕ್ತರಾಗಿದ್ದಾರೆ.
ಅಕ್ಟೋಬರ್ 30ರಂದು ಗೌತಮ್ ಕಿಚ್ಲು ಎಂಬುವವರೊಂದಿಗೆ ತಾವು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದಾಗಿ ಕಾಜಲ್ ಅಗರ್ವಾಲ್ ತಿಳಿಸಿದ್ದಾರೆ, ಗೌತಮ್ ಕಿಚ್ಲು ಡಿಸೆರ್ನ್ ಲಿವಿಂಗ್ ಎನ್ನುವ ಇಂಟಿರಿಯಲ್ ಡಿಸೈನಿಂಹ್ ಹಾಗೂ ಫರ್ನಿಶಿಂಗ್ ಕಂಪೆನಿಯ ಸ್ಥಾಪಕರಾಗಿದ್ದಾರೆ.
ತಮ್ಮ ಮದುವೆ ಮುಂಬೈನಲ್ಲಿ ನಡೆಯಲಿದ್ದು, ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಕುಟುಂಬಗಳ ನಡುವಿನ ಪರಿಚಯದಿಂದ ಗೌತಮ್ ಮತ್ತು ಕಾಜಲ್ ನಡುವೆ ಸ್ನೇಹ ಬೆಳೆದಿದೆಯಂತೆ, ಸ್ನೇಹ ಪ್ರೀತಿಯಾಗಿ ಬದಲಾಗಿ ಈಗ ಈ ಜೋಡಿ ವಿವಾಹವಾಗುತ್ತಿದ್ದಾರೆ.
PublicNext
07/10/2020 05:21 pm