ಕಾಬೂಲ್: ತಾಲಿಬಾನ್ಗಳು ಸೃಷ್ಟಿಸಿರುವ ಆತಂಕಕ್ಕೆ ಸಾವಿರಾರು ಜನರು ಅಘ್ಫಾನಿಸ್ತಾನವನ್ನು ಈಗಾಗಲೇ ತೊರೆದಿದ್ದಾರೆ. ಅಷ್ಟೇ ಅಲ್ಲದೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ಹಾರಲು ಸಾವಿರಾರು ಮಂದಿ ಸಿದ್ಧರಾಗಿದ್ದಾರೆ. ಅಫ್ಘಾನಿಸ್ತಾನದ ಖ್ಯಾತ ಪಾಪ್ ಸಿಂಗರ್ ಅರ್ಯಾನಾ ಸಯೀದ್ ಅವರು ಕೂಡ ಪತಿಯೊಂದಿಗೆ ತಾಯ್ನಾಡನ್ನು ತೊರೆದು, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.
"ದೇಶದಲ್ಲಾದ ಭಯಾನಕ ಬದಲಾವಣೆಗಳ ತುಂಬಾ ಪರಿಣಾಮ ಬೀರುತ್ತಿವೆ. ನನ್ನ ಪ್ರೀತಿಯ ಜನರು ಯಾವುದೇ ಭಯವಿಲ್ಲದೇ, ಶಾಂತಿಯುತ ಜೀವನ ಪ್ರಾರಂಭಿಸಲು ಸಾಧ್ಯವಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಹೃದಯ, ನನ್ನ ಪ್ರಾರ್ಥನೆ ಮತ್ತು ನನ್ನ ಆಲೋಚನೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಅಫ್ಘಾನಿಸ್ತಾನದಲ್ಲಿ ನನ್ನ ಇರುವಿಕೆಯ ಬಗ್ಗೆ ಕಾಳಜಿ ಹೊಂದಿ ಶುಭ ಹಾರೈಸಿದ ಮತ್ತು ಪ್ರಾರ್ಥನೆ ಮಾಡಿದ್ದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ಅರ್ಯಾನಾ ಸಯೀದ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
24/08/2021 07:30 am