ವಾಷಿಂಗ್ಟನ್ : ವಿಶ್ವದ ದೊಡ್ಡಣ್ಣ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನಾ ಕಾರಾಗೃಹದಲ್ಲಿರಿಸಿ ರೇಪ್ ಮಾಡಬೇಕು ಎಂದು ನಟಿ ಡೆಬ್ರಾ ಮೆಸ್ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸದಾ ಒಂದಿಲ್ಲೊಂದು ರೀತಿಯಲ್ಲಿ ಟ್ರಂಪ್ ವಿರುದ್ಧ ಕೆಂಡ ಕಾರುತ್ತಿರುವ ನಟಿ ಇದೀಗ ಮಾಡಿರುವ ಟ್ವೀಟ್ ಭಾರೀ ಸಂಚಲನವನ್ನು ಸೃಷ್ಠಿಸಿದೆ.
'ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಂಡು ಶ್ವೇತಭವನದಿಂದ ಅವರು ನಿರ್ಗಮಿಸುತ್ತಿದ್ದಂತೆಯೇ ಅವರನ್ನು ಜೈಲಿನಲ್ಲಿ ಇರಿಸಬೇಕು.
ಅಲ್ಲಿ ಎಲ್ಲ ಕೈದಿಗಳಿಗೆ ಇವರು ಬಾಯ್ ಫ್ರೆಂಡ್ ಆಗಬೇಕು. ಎಲ್ಲರೂ ಸೇರಿ ಟ್ರಂಪ್ ಅವರನ್ನು ರೇಪ್ ಮಾಡಬೇಕು' ಎಂದು ಡೆಬ್ರಾ ಮೆಸ್ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ನಟಿ ಖುದ್ದು ಟ್ರಂಪ್ ಅವರಿಗೂ ಟ್ಯಾಗ್ ಮಾಡಿ ಅದರ ಜತೆಗೆ ಕ್ಯಾಪ್ಷನ್ ಬರೆದಿರುವ ಈಕೆ, ನೀವು ದುರ್ಬಲ, ಪ್ರತೀಕಾರಕ್ಕೆ ಬಯಸುವ ವ್ಯಕ್ತಿ, ಕ್ರಿಮಿನಲ್, ಅಸಮರ್ಥ, ಅವಿವೇಕಿ ಮಾತ್ರವಲ್ಲದೇ ಭಯಭೀತಗೊಂಡಿರುವ ವ್ಯಕ್ತಿ ಎಂದು ನಿಂದಿಸಿದ್ದಾರೆ.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಈಗ ಆಕೆಯ ಟ್ವೀಟ್ ಡಿಲೀಟ್ ಮಾಡಲಾಗಿದೆ. ಆದರೆ ಅದರ ಸ್ಕ್ರೀನ್ ಷಾಟ್ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
16/12/2020 04:26 pm