ಮುಂಬೈ: ಬಾಲಿವುಡ್ ನ ಖಳನಾಯಕ ನಟ ಸೋನು ಸೂದ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಲವೂ ಅವರು ಸಿನಿಮಾದಿಂದ ಸುದ್ಧಿ ಆಗಿಯೇ ಇಲ್ಲ. ತಮ್ಮ ಎಂದಿನ ಸಾಮಾಜಿಕ ಕಳಕಳಿಯ ಕೆಲಸದಿಂದಲೇ ಗಮನ ಸೆಳೆದಿದ್ದಾರೆ.
ಈ ಹುಡುಗಿಗೆ ಹೆಚ್ಚುವರಿ ನಾಲ್ಕು ಕಾಲು, ನಾಲ್ಕು ಕೈಗಳು ಇವೆ. ಆದರೆ, ಇದರ ಶಸ್ತ್ರಚಿಕಿತ್ಸೆಗೆ ಚಾಹುಮುಖಿ ಹೆಸರಿನ ಹುಡುಗಿ ಪೋಷಕರ ಬಳಿ ದುಡ್ಡೇ ಇಲ್ಲ. ಹಾಗಾಗಿಯೇ ಈಗ ನಟ ಸೋನು ಸೂದ್ ಈ ಹುಡುಗಿಗೆ ಸಹಾಯ ಹಸ್ತಚಾಚಿದ್ದಾರೆ.
ಈ ಹುಡುಗಿಯ ಶಸ್ತ್ರಚಿಕಿತ್ಸೆಗೆ ಸೋನು ಸೂದ್ ಧನ ಸಹಾಯ ಮಾಡಿದ್ದಾರೆ. ಸದ್ಯ ಈ ಹುಡುಗಿಯ ಚಿಕಿತ್ಸೆ ಯಶಸ್ವಿ ಆಗಿದೆ ಅಂತಲೂ ಸ್ವತಃ ಸೋನು ಸೂದ್ ಇನ್‌ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.
PublicNext
10/06/2022 04:20 pm