ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲಯಾಳಂ ನಟಿ ಕೆಪಿಎಸಿ ಲಲಿತಾ ವಿಧಿವಶ

ಕೊಚ್ಚಿ(ಕೇರಳ): ರಂಗಭೂಮಿಯಿಂದ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿ, 50 ವರ್ಷಗಳಿಂದ ಸುಮಾರು 500 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಖ್ಯಾತ ಮಲಯಾಳಂ ಚಲನಚಿತ್ರ ಮತ್ತು ರಂಗಭೂಮಿ ನಟಿ ಕೆಪಿಎಸಿ ಲಲಿತಾ ಮಂಗಳವಾರ ರಾತ್ರಿ ಕೇರಳದ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾದರು.

74 ವರ್ಷದ ಲಲಿತಾ ಅವರು ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಲಲಿತಾ ಅವರ ಸಾಧನೆಯನ್ನು ಗುರುತಿಸಿ 4 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳೊಂದಿಗೆ ಅತ್ಯುತ್ತಮ ಪೋಷಕ ನಟಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

1999ರಲ್ಲಿ 'ಅಮರಂ' ಮತ್ತು 2000 ರಲ್ಲಿ 'ಶಾಂತಂ' ಪಾತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಲಲಿತಾ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

Edited By : Nirmala Aralikatti
PublicNext

PublicNext

23/02/2022 08:22 am

Cinque Terre

48.35 K

Cinque Terre

1

ಸಂಬಂಧಿತ ಸುದ್ದಿ