ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಪ್ಪು ಜೊತೆಗಿನ ಕೊನೆಯ ವಿಡಿಯೋ' ಹಂಚಿಕೊಂಡ ನಟ ಜಗ್ಗೇಶ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಅಭಿಮಾನಿಗಳ ಅಪ್ಪು ಈಗ ನಮ್ಮೊಂದಿಗೆ ಇಲ್ಲ. ಅವರ ಅಗಲುವಿಕೆ ನೋವು ಅಭಿಮಾನಿಗಳಿಗೆ ಈಗಲೂ ಕಾಡುತ್ತಿದೆ. ಈ ನಡುವೆ ನಟ ಜಗ್ಗೇಶ್‌ ಅವರು ಇದೀಗ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಂತ್ರಾಲಯದಲ್ಲಿ ಪುನೀತ್‌ ರಾಜ್‌ಕುಮಾರ್, ಜಗ್ಗೇಶ್ ಅವರು ಒಟ್ಟಿಗೆ ಇರುವ ವಿಡಿಯೋ ಇದಾಗಿದೆ. ಕೊನೆಯದಾಗಿ ಇವರು ಮಂತ್ರಾಲಯದಲ್ಲಿ ಭೇಟಿ ಮಾಡಿದ್ದ ಸಂದರ್ಭ. ಹಾಗಾಗಿ ಈ ವಿಡಿಯೋವನ್ನು ಜಗ್ಗೇಶ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಚಿಕೊಂಡಿದ್ದಾರೆ.

ಆ ಸಂದರ್ಭವನ್ನು ನೆನೆದು ಜಗ್ಗೇಶ್ "ಮಂತ್ರಾಲಯದಲ್ಲಿ April 5th 2021 ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವೀಡಿಯೋ ಕಳಿಸಿದ ಮಂತ್ರಾಲಯ ಪಿ.ಆರ್.ಓ ನರಸಿಂಹಾಚಾರ್ಯ ರವರಿಗೆ ಧನ್ಯವಾದ. ಪುನೀತ ಅಲ್ಲೆ ರಾಯರ ಜೊತೆ ಉಳಿದುಬಿಟ್ಟ ಎಂದು ಬರೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

12/02/2022 09:29 pm

Cinque Terre

102.25 K

Cinque Terre

14