ಬೆಂಗಳೂರು: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅಗತ್ಯವಿರುವವರಿಗೆ ಬೇಕಾದ ನೆರವನ್ನು ತಲುಪಿಸುವ ವ್ಯವಸ್ಥೆ ಕೈಗೊಂಡಿದ್ದಾರೆ. ಟ್ರಸ್ಟ್ ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಸುದೀಪ್ ಅಭಿಮಾನಿಗಳ ಸಂಘಗಳು ಕೂಡ ಜನರ ನೆರವಿಗೆ ಧಾವಿಸುತ್ತಾರೆ. ಇದೀಗ ಈ ಟ್ರಸ್ಟ್ ಮೂಲಕ ಪುನೀತ್ ರಾಜ್‌ಕುಮಾರ್ ಅಭಿಮಾನಿ ಕಷ್ಟವನ್ನು ಸುದೀಪ್ ಪರಿಹರಿಸಿದ್ದಾರೆ.
ಪುನೀತ್ ಅಭಿಮಾನಿ ಬೆನಕ ಅಪ್ಪು ತಾಯಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅಮ್ಮನಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲದೆ ಬೆನಕ ಅಪ್ಪು ಕಷ್ಟದಲ್ಲಿದ್ದರು. ಪುನೀತ್ ರಾಜ್ಕುಮಾರ್ಗೆ ಬೆನಕ ಅಪ್ಪು ಆತ್ಮೀಯ ಅಭಿಮಾನಿ ಆಗಿದ್ದರು. ಅವರ ಕುಟುಂಬದ ಕಷ್ಟಕ್ಕೆ ಪುನೀತ್ ರಾಜ್ ಕುಮಾರ್ ಯಾವಾಗ್ಲು ಸಹಾಯ ಮಾಡುತ್ತಿದ್ದರು. ಆದರೆ ಈಗ ಪುನೀತ್ ಇಲ್ಲವಾಗಿದ್ದಾರೆ. ಈ ಸಮಯದಲ್ಲೇ ಬೆನಕ ಅಪ್ಪು ಅಮ್ಮನಿಗೆ ರಸ್ತೆ ಅಪಘಾತವಾಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದರು. ಇದರಿಂದ ಅಮ್ಮನ ಚಿಕಿತ್ಸೆಗೆ ಹಣ ಇಲ್ಲದೆ ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದರು. ಕೊನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯನ್ನು ಸಂಪರ್ಕ ಮಾಡಿದ್ದರು.
ಇನ್ನು, ಪುನೀತ್ ಅಭಿಮಾನಿಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಸಹಾಯ ಮಾಡಿದೆ. ಬೆನಕ ಅಪ್ಪು ಅವರ ತಾಯಿ ಇರುವ ಆಸ್ಪತ್ರೆಗೆ ತೆರಳಿ ಅಪ್ಪು ಅಭಿಮಾನಿ ಅಮ್ಮನ ಸಂಪೂರ್ಣ ಚಿಕಿತ್ಸೆ ಹೊಣೆಯನ್ನು ಕಿಚ್ಚ ಸುದೀಪ್ ಹೊತ್ತಿದ್ದಾರೆ.
PublicNext
28/11/2021 07:24 am