ಪುನೀತ್ ಅಕಾಲಿಕ ನಿಧನದಿಂದ ಜನರು ಕಂಗೆಟ್ಟಿದ್ದಾರೆ. ಸಿನಿಮಾ ಪರದೆಯಷ್ಟೇ ಅಲ್ಲ ನಿಜ ಜೀವನದಲ್ಲೂ ಹಲವರ ಬಾಳಿಗೆ ಹಿರೋ ಆಗಿ ಸಹಾಯ ಮಾಡುತ್ತಿದ್ದ ನಟನನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಭಾಗ್ಯ. ಅಪ್ಪುವಿನ ಅಂತಿಮ ದರ್ಶನಕ್ಕೆ ಲಕ್ಷಗಟ್ಟಲೇ ಜನ ಸೇರಿದ್ದರು.ಇಂದಿಗೂ ಕೂಡ ಅಪ್ಪುವಿನ ಸಮಾಧಿ ನೋಡಲು ಜನರ ದಂಡೇ ಹರಿದು ಬರುತ್ತಿದೆ.
ಹೌದು ಜಿಲ್ಲೆಯ ಪಾವಗಡ ತಾಲ್ಲೂಕಿನ ಪೊನ್ನ ಸಮುದ್ರ ಗ್ರಾಮದ ದಯಾನಂದ್ ಅಪ್ಪುವಿನ ಅಪ್ಪಟ ಅಭಿಮಾನಿ, ಇವರು ಎತ್ತಿನಗಾಡಿಯಲ್ಲಿ ಬಂದು ಅಪ್ಪುವಿನ ಸಮಾಧಿಗೆ ನಮಸ್ಕರಿಸಿದ್ದಾರೆ.
ನಿನ್ನೆ ಬೆಳಗ್ಗೆ ಪೊನ್ನಸಮುದ್ರದಿಂದ ಎತ್ತಿನಗಾಡಿಯಲ್ಲಿ ಹೊರಟ ದಯಾನಂದ್ ಇಂದು ತಲುಪಿದ್ದಾರೆ.ನಾಲ್ಕು ಎಕೆರೆಯಲ್ಲಿ ಕೃಷಿ ಮಾಡುತ್ತಿರುವ ಇವರು ಪುನೀತ್ ರೈತರಿಗೆ ಮಾಡುತ್ತಿದ್ದ ಸಹಾಯದಿಂದ ಪ್ರೇರಣೆಗೊಂಡಿದ್ದರು ಹೀಗಾಗಿ ಎತ್ತಿನ ಗಾಡಿಯಲ್ಲೇ ಬಂದು ಸಮಾಧಿ ವೀಕ್ಷಣೆ ಮಾಡಿದ್ದಾರೆ
PublicNext
03/11/2021 12:20 pm