ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್ ಡೌನ್ ವೇಳೆ ಸಹಾಯ ಮಾಡಿದ್ದು ತೃಪ್ತಿ ಕೊಟ್ಟಿದೆ

ಹೈದರಾಬಾದ್: ಕೋವಿಡ್​-19 ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಸಹಾಯ ಮಾಡಿರುವುದು ನನಗೆ ಸಂತೋಷ ಮತ್ತು ತೃಪ್ತಿ ನೀಡಿದೆ ಎಂದು ನಟ ಸೋನು ಸೂದ್ ಹೇಳಿದರು. ಹೈದರಾಬಾದ್‌ನ ಗಚ್ಚಿಬೌಲಿಯ ಸಂಧ್ಯಾ ಕನ್ವೆನ್ಷನ್‌ನಲ್ಲಿ ಸೈಬರಾಬಾದ್ ಪೊಲೀಸರು ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಾಕ್​ಡೌನ್​​ ಸಂದರ್ಭದಲ್ಲಿ ಯಾವುದೇ ಕರೆಗಳನ್ನು ನಿರ್ಲಕ್ಷಿಸಬೇಡಿ ಎಂದು ನನ್ನ ವ್ಯವಸ್ಥಾಪಕರಿಗೆ ಹೇಳಿದ್ದೆ. ಹಾಗಾಗಿ ದೇಶಾದ್ಯಂತ 7 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು ಎಂದರು.

ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಒಟ್ಟಾರೆಯಾಗಿ 7,26,727 ವಲಸೆ ಕಾರ್ಮಿಕರನ್ನು ತಮ್ಮ ತವರಿಗೆ ನಾವು ಸ್ಥಳಾಂತರಿಸಿದ್ದೇವೆ. 350 ವಲಸಿಗರನ್ನು ಮೊದಲ ಬಾರಿಗೆ ಕರ್ನಾಟಕಕ್ಕೆ ಕಳುಹಿಸಲಾಗಿದೆ. ಜೊತೆಗೆ ಸಂಕಷ್ಟದಲ್ಲಿರುವ ಸುಮಾರು 500 ಜನರಿಗೆ ಪಡಿತರ ಚೀಲಗಳನ್ನು ವಿತರಿಸಲಾಯಿತು ಎಂದರು.

Edited By : Nagaraj Tulugeri
PublicNext

PublicNext

19/02/2021 10:43 am

Cinque Terre

75.84 K

Cinque Terre

5