ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಭೂತಗಳಲ್ಲಿ ಲೀನರಾದ ಎಸ್ ಪಿ ಬಿ : ಗಾನ ಚಕ್ರವರ್ತಿಗೆ ಕಣ್ಣೀರಿನ ಬೀಳ್ಕೊಡುಗೆ

ಚನ್ನೈ : ಸ್ವರಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ(74) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.

ಶುಕ್ರವಾರ ರಾತ್ರಿ ತಿರುವಳ್ಳೂರು ಜಿಲ್ಲೆಯ ತಾಮರೈಪಾಕಂನಲ್ಲಿರುವ ಅವರ ತೋಟದ ಮನೆಗೆ ಸ್ಥಳಾಂತರಿಸಲಾಗಿತ್ತು.

ಸಾವಿರಾರು ಅಭಿಮಾನಿಗಳು ಎಸ್ ಪಿಬಿ ಅವರ ಅಂತಿಮ ದರ್ಶನ ಪಡೆದರು. ಬಾಲು ಫಾರ್ಮ್ ಹೌಸ್ ನಲ್ಲೇ ಎಸ್ಪಿಬಿ ಅಂತ್ಯಕ್ರಿಯೆ ಮಾಡಲಾಯಿತು.

ಅವರ ಪುತ್ರ ಚರಣ್ ಅವರು ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನೆರವೇರಿಸಿದರು.

ಎಸ್ಪಿಬಿ ಅಂತ್ಯಕ್ರಿಯೆಯಲ್ಲಿ ಅನೇಕ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಬಾರದ ಲೋಕಕ್ಕೆ ತೆರಳಿದ ಸಂಗೀತ ಲೋಕದ ದಿಗ್ಗಜ ಗಾನ ಗಾರುಡಿಗ ಇನ್ನು ನೆನಪು ಮಾತ್ರ.

ಆದರೆ ಅವರು ಹಾಡುಗಳ ಮೂಲಕ ಅಭಿಮಾನಿಗಳ ನೆನಪಿನಲ್ಲಿ ಸದಾ ಜೀವಂತವಾಗಿರುತ್ತಾರೆ.

ಇಂತಹ ಕಲಾವಿದನ ಅಗಲಿಕೆಗೆ ಕೋಟ್ಯಂತ ಮಂದಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ಅಭಿಮಾನಿಗಳು ಬಾಲು ಅವರು ಮತ್ತೆ ಹುಟ್ಟಿ ಬನ್ನಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

26/09/2020 01:24 pm

Cinque Terre

111.6 K

Cinque Terre

0