ಜಾರ್ಖಂಡ್ : ಜಾರ್ಖಂಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಪರೀಕ್ಷಾ ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ ಐಶ್ಚರ್ಯಾ ರೈ ತಪ್ಪಾಗಿ ಕಾಣಿಸಿಕೊಂಡಿದ್ದು, ವಿವಿಯ ತಾಂತ್ರಿಕ ದೋಷಕ್ಕೆ ಸದ್ಯ ಭಾರೀ ಟೀಕೆಗಳು ವ್ಯಕ್ತವಾಗಿದೆ.ಹೌದು ಪರೀಕ್ಷೆಗೂ ಮುನ್ನ ದಿನವೇ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಪ್ರವೇಶ ಪತ್ರ ಪಡೆಯಲು ಮುಂದಾದಾಗ ವಿದ್ಯಾರ್ಥಿನಿಗೆ ಶಾಕ್ ಕಾದಿತ್ತು. ತನ್ನ ಫೋಟೋ ಇರುವ ಜಾಗದಲ್ಲಿ ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಫೋಟೋ ನೋಡಿ ಗಲಿಬಿಲಿಗೊಂಡಿದ್ದಾಳೆ.
ಪಿಜಿ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕಾಜಲ್ ಕುಮಾರಿ ಪ್ರವೇಶ ಪತ್ರಕ್ಕೆ ನಟಿ ಐಶ್ವರ್ಯಾ ರೈ ಅವರ ಫೋಟೋ ಮತ್ತು ಸಹಿ ಕಂಡು ಗಾಬರಿಯಾಗಿದ್ದಾಳೆ.ವಿಶ್ವವಿದ್ಯಾಲಯದ ಯಡವಟ್ಟಿನಿಂದಲೇ ಈಗಾಗಿದೆ ಎಂಬ ಆರೋಪ ಕೇಳಿಬಂದಿದೆ. ಅತ್ತ, ವಿದ್ಯಾರ್ಥಿನಿಯು ಫಾರ್ಮ್ ಭರ್ತಿ ಮಾಡುವ ಸರಿಯಾದ ಮಾಹಿತಿ ಹಾಗೂ ತನ್ನದೇ ಫೋಟೋ ಹಾಕಿರುವೆ. ಅರ್ಜಿ ಹಾಕಿದ ಬಳಿಕ ಪ್ರಿಂಟೌಟ್ ತೆಗೆದ ಫಾರ್ಮ್ ಕೂಡ ಸರಿಯಾಗಿತ್ತು.
ಆನ್ಲೈನ್ನಲ್ಲಿ ಪ್ರವೇಶ ಪತ್ರ ಪಡೆಯಲು ಹೋದಾಗ ಫೋಟೋ ಮತ್ತು ಸಹಿ ಬಲಾಗಿದೆ. ನನಗೆ ಎಕ್ಸಾಂ ಬರೆಯಲು ಅವಕಾಶ ಸಿಗುತ್ತೋ ಇಲ್ಲವೋ ಎಂಬ ಭಯ ಕಾಡುತ್ತಿದೆ. ಯಾರೋ ಮಾಡಿದ ತಪ್ಪಿಗೆ ನನಗ್ಯಾಕೆ ಶಿಕ್ಷೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಬಿಎಂಕೆಯು ಪರೀಕ್ಷಾ ನಿಯಂತ್ರಕ ಎಸ್.ಕೆ. ಬರನ್ವಾಲ್, ವಿವಿಯ ಹೆಸರು ಕೆಡಿಸಲು ಯಾರೋ ಸಂಚು ನಡೆಸಿ ಹೀಗೆ ಮಾಡಿದ್ದಾರೆ. ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
PublicNext
11/10/2022 02:18 pm