ಹಾಸನ : ಮಳೆಯಿಂದ ಬೆಳೆ ಕಳೆದುಕೊಂಡ ರೈತನ ಮಗನ ಪರೀಕ್ಷಾ ಶುಲ್ಕ ಪಾವತಿಸಿ ನಟ ಕಿಚ್ಚಾ ಸುದೀಪ್ ಮಾನವೀಯತೆ ಮೆರೆದಿದ್ದಾರೆ.
ಹೌದು ಬಿ.ಎಸ್.ಇ. ನರ್ಸಿಂಗ್ ವಿದ್ಯಾರ್ಥಿ ಗಿರೀಶ ಕುಮಾರ್ ಗೆ 21 ಸಾವಿರ ಕಾಲೇಜು ಶುಲ್ಕವನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಾವತಿಸಲಾಗಿದೆ.
ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ಗಿರೀಶ್ ಕುಟುಂಬ ಪರೀಕ್ಷಾ ಶುಲ್ಕ ಕಟ್ಟಲಾಗದೆ ಹಾಸನದ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘವನ್ನು ಸಂಪರ್ಕಿಸಿ ಸಹಾಯ ಪಡೆದಿದ್ದಾರೆ. ಇನ್ನುಗಿರೀಶ್ ಕುಟುಂಬದ ಕಷ್ಟ ಆಲಿಸಿ ಕಿಚ್ಚ ಇಂದು ಚೆಕ್ ಮೂಲಕ ಹಣ ನೀಡಿದ್ದಾರೆ.
PublicNext
25/11/2021 09:42 am