ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

14 ಟನ್ ತೂಕದ ವೀಣೆ ಸ್ಥಾಪಿಸಿ ಲತಾ ಮಂಗೇಶ್ಕರ್​ಗೆ ಗೌರವ

ಯುಪಿ: ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚೌಕದಲ್ಲಿ 14 ಟನ್ ತೂಕದ ವೀಣೆಯನ್ನು ಸ್ಥಾಪಿಸಲಾಗಿದೆ. ಲತಾ ಮಂಗೇಶ್ಕರ್ ಚೌಕದಲ್ಲಿರುವ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ಇಲ್ಲಿ ಸ್ಥಾಪಿಸಲಾದ ಬೃಹತ್ ವೀಣೆ. ಈ ಚೌಕಕ್ಕೆ "ಲತಾ ಮಂಗೇಶ್ಕರ್ ಚೌಕ್ ಎಂದೂ ಹೆಸರಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಅಂದರೆ ಸೆಪ್ಟೆಂಬರ್ 28 ರಂದು ಈ ಚೌಕವನ್ನು ಉದ್ಘಾಟಿಸಿದರು.

ಲತಾ ಮಂಗೇಶ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ನಯಾ ಘಾಟ್ ಅನ್ನು ಅವರ ಹೆಸರಿನಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು. ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದರೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸರಯೂ ತೀರದ ದಡದಲ್ಲಿರುವ ಘಾಟ್​ನಲ್ಲಿರುವ ಲತಾ ಮಂಗೇಶ್ಕರ್ ಚೌಕದಲ್ಲಿ 14 ಟನ್ ತೂಕದ ದೈತ್ಯ ವೀಣೆ ಅತ್ಯಂತ ದೊಡ್ಡ ಆಕರ್ಷಣೆಯಾಗಿದೆ. ಅಂದಾಜು 7.9 ಕೋಟಿ ಹಣದಲ್ಲಿ ಲತಾ ಮಂಗೇಶ್ಕರ್ ಚೌಕ್ ಅನ್ನು ಸರ್ಕಾರ ಅಭಿವೃದ್ಧಿಪಡಿಸಿದೆ. ಚೌಕದಲ್ಲಿ ಸ್ಥಾಪಿಸಲಾದ ಈ ದೈತ್ಯ ವೀಣೆಯನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಕುಶಲಕರ್ಮಿ ರಾಮ್ ಸುತಾರ್ ಅವರು ಮಾಡಿದ್ದಾರೆ. ಈ ವೀಣೆ ತುಂಬಾ ಆಕರ್ಷಕವಾಗಿದೆ.

Edited By : Abhishek Kamoji
PublicNext

PublicNext

28/09/2022 06:58 pm

Cinque Terre

182.37 K

Cinque Terre

1