ಮೈಸೂರು: ದೇಶದೆಲ್ಲಡೆ ಇಂದು 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ನಟ ಶಿವರಾಜ್ಕುಮಾರ್ ಅವರು ಮೈಸೂರಿನ ಶಕ್ತಿಧಾಮದಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.
ಅನೇಕ ಸಿನಿಮಾಗಳಲ್ಲಿ ‘ಹ್ಯಾಟ್ರಿಕ್ ಹೀರೋ’ ಬ್ಯುಸಿ ಇದ್ದಾರೆ. ಆದರೆ ಇಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುವು ಮಾಡಿಕೊಂಡು ಶಕ್ತಿದಾಮದ ಮಕ್ಕಳಿಗಾಗಿ ದಿನವನ್ನು ಮೀಸಲಿದ್ದಾರೆ. ಪತ್ನಿ ಗೀತಾ ಶಿವರಾಜ್ಕುಮಾರ್ ಜೊತೆಗೆ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಆಶ್ರಮದ ಮಕ್ಕಳಿಗೆ ಸಿಹಿ ಹಂಚಿ, ಅವರ ಜೊತೆ ಒಂದಷ್ಟು ಹೊತ್ತು ಕಾಲ ಕಳೆದಿದರು.
ಮಕ್ಕಳ ಜೊತೆ ಶಿವಣ್ಣ ಜಾಲಿ ರೈಡ್ ಮಾಡಿದರು. ಅವರ ಜೊತೆ ಬೆರೆತ ಶಕ್ತಿಧಾಮದ ಮಕ್ಕಳು ಖುಷಿಖುಷಿಯಾಗಿ ಕಾಲ ಕಳೆದರು.
PublicNext
26/01/2022 02:18 pm