ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಸ್ತೂರಿ ಮಹಲ್‌ನಿಂದ ಡಿಂಪಲ್ ಕ್ವೀನ್‌ಗೆ ಕೋಕ್!

ಬೆಂಗಳೂರು: ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು 'ಕಸ್ತೂರಿ ಮಹಲ್' ಸಿನಿಮಾದ ನಾಯಕಿ ಸ್ಥಾನದಿಂದ ಕೈಬಿಡಲಾಗಿದೆ.

ಹಿರಿಯ ನಿರ್ದೇಶಕ ದಿನೇಶ್‌ ಬಾಬು ನಿರ್ದೇಶನದ ಹೊಸ ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಆರಂಭದಲ್ಲಿ ಈ ಚಿತ್ರಕ್ಕೆ 'ಕಸ್ತೂರಿ ನಿವಾಸ' ಅಂಥ ಟೈಟಲ್‌ ಇಟ್ಟಿದ್ದ ಚಿತ್ರತಂಡವು ಆನಂತರ 'ಕಸ್ತೂರಿ ಮಹಲ್‌' ಎಂದು ನಾಮಕರಣ ಮಾಡಿತ್ತು. ಆದರೆ ಈ ಚಿತ್ರ ತಂಡದಿಂದ ಬಿಗ್‌ ಸುದ್ದಿಯೊಂದು ಹೊರಬಿದ್ದಿದೆ.

ರಚಿತಾ ರಾಮ್ ಅವರು ಆರಂಭದಲ್ಲಿ ಕಸ್ತೂರಿ ಮಹಲ್ ಸಿನಿಮಾದ ಕಥೆ ಕೇಳಿ ಈ ಕ್ಯಾರೆಕ್ಟರ್‌ ಮಾಡಲು ಖುಷಿಯಿಂದ ಒಪ್ಪಿಕೊಂಡಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಸಿನಿಮಾದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಚಿತ್ರದಿಂದ ಕೈ ಬಿಡಬೇಕು ಅಂತ ಕೇಳಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೈಬಿಟ್ಟು ಬೇರೆಯರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ದಿನೇಶ್‌ ಬಾಬು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

21/09/2020 06:29 pm

Cinque Terre

80.48 K

Cinque Terre

0