ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಹಾಗೂ ಟೀನಾ ಅಂಬಾನಿ ಅವರ ಪುತ್ರ ಅನ್ಮೋಲ್ ಅಂಬಾನಿ, ಕ್ರಿಶಾ ಶಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಜೈ ಅನ್ಮೋಲ್ ಅಂಬಾನಿ ಮುಂಬೈನ ಕೆಫೆ ಪರೇಡ್‍ನಲ್ಲಿರುವ ಅವರ ಕುಟುಂಬದ ಮನೆಯಾದ 'ಸೀ ವಿಂಡ್'ನಲ್ಲಿ ಕ್ರಿಶಾ ಶಾ ಅವರನ್ನು ಭಾನುವಾರ ಸಂಜೆ ವಿವಾಹವಾದರು. ವರ ಬಿಳಿ ಶೆರ್ವಾನಿ, ವಧು ಕೆಂಪು ಮತ್ತು ಚಿನ್ನದ ಬಣ್ಣದ ಲೆಹೆಂಗಾವನ್ನು ತೊಟ್ಟಿದ್ದರು. ವಧು, ವರ ಸಾಕಷ್ಟು ವಜ್ರದ ಆಭರಣಗಳನ್ನು ತೊಟ್ಟುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ನವ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ವಿವಾಹದಲ್ಲಿ ಅಂಬಾನಿ ಕುಟುಂಬ ಸ್ನೇಹಿತರು, ಗಣ್ಯರು, ಬಾಲಿವುಡ್ ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಅಂಬಾನಿ ಕುಟುಂಬ ಸೋಮವಾರ ತಮ್ಮ ಮನೆಯಲ್ಲಿ ಪಾರ್ಟಿಯನ್ನು ನೀಡಲಿದ್ದು, ಅಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
PublicNext
21/02/2022 04:20 pm