ಉಪ್ಪಿ ಅಲಿಯಾಸ್ ಉಪೇಂದ್ರ ಕನ್ನಡದ ಸಿನಿಮಾ ಇಂಡ್ರಸ್ಟೀಯಲ್ಲಿ ರಿಯಾಲಿಟಿ ಎಂಬ ಮಾತಿಗೆ ನೈಜತೆ ತಂದು ರಿಯಲ್ ಸ್ಟಾರ್ ಖ್ಯಾತಿಗೆ ಪಾತ್ರವಾಗಿದವರು. ತನ್ನ ಒಂದು ಚಿಕ್ಕ ಮನೆ ದಿನದ ಎರೆಡ್ಹೊತ್ತು ಊಟಕ್ಕೂ ಕಷ್ಟ ಪಡುತ್ತಿದ್ದ ಹುಡಗನೀಗ ಪ್ರಜಾಕೀಯ ಮೂಲಕ ರಾಜಕೀಯಕ್ಕೂ ಲಗ್ಗೆ ಇಡಲು ರಿಯಲ್ ಖಾಕಿ ತೊಟ್ಟ ಸಿಂಪಲ್ ಮ್ಯಾನ್.
ಬಿ.ಕಾಮ್ ಶಿಕ್ಷಣ ಪೂರ್ಣಗೊಳಿಸಿದ ಉಪ್ಪಿ ಕಾಶಿನಾಥ್ ಗರಡಿಯಲ್ಲಿ ಪಳಗಿ ಸಣ್ಣ ಸಣ್ಣ ಪಾತ್ರಗಳು ಮೂಲಕವೇ ಚಂದನವನದ ಕಾಲಿಟ್ಟವರು ಕನ್ನಡದ ಚಿತ್ರರಂಗದಲ್ಲೇ ಎಂದಿಗೂ ರೆಕಾರ್ಡ್ ಬ್ರೇಕ್ ಮಾಡದ 'ಓಂ' ಸಿನಿಮಾದಲ್ಲಿ ರೌಡಿಸಂ ಚಿತ್ರದಲ್ಲಿ ನಿಜವಾದ ರೌಡಿಗಳು ಮೂಲಕವೇ ಅಭಿನಯ ಮಾಡಿಸಿ ಚಿತ್ರದ ನಿರ್ದೇಶಕರಾಗಿ ಗೆದ್ದವರು.
ನಿಮಗೆ ಗೊತ್ತಿರಲಿ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ರೋಬೋಟ್ ಶಿವಾಜಿ ಫಿಲ್ಮ್ಸ್ ಡೈರೆಕ್ಟರ್ ಶಂಕರ್, ಉಪೇಂದ್ರ ಅವರಿಂದ ಪ್ರೇರಣೆಯಾಗಿ ಸಿನಿಮಾ ಮಾಡ್ತಾರಂತೆ ಅಂತಹ ಕ್ರೀಯೆಟಿವ್ ಥಿಂಕಿಂಗ್ ಉಪ್ಪಿಯದು.
ಈ ಉಪೇಂದ್ರ ಕೇವಲ ನಟರಷ್ಟೇ ಅಲ್ಲದೇ ನಿರ್ದೇಶಕ, ಬರಹಗಾರ, ಸಾಹಿತ್ಯ ಬರಹಗಾರ ಮತ್ತು ನಿರ್ಮಾಪಕ ಎಲ್ಲ ಕಲೆಗೂ ಉಪ್ಪಿ ಸೈ ಎನ್ನುತ್ತಾರೆ. ಸಾಧುಕೋಕಿಲಾ ಅವರನ್ನು ಒಬ್ಬ ನಟನಾಗಿ ಗುರುತಿಸಿ ಮುಂದೆ ಮ್ಯೂಸಿಕ್ ಡೈರೆಕ್ಟರ್, ಡೈರೆಕ್ಟರ್ ಮಾಡಿದ್ದು ಈ ಉಪ್ಪಿದಾದಾ ಈ ಉಪ್ಪಿಯ ಬರಹಕ್ಕೆ ಎಂತಹ ಪ್ರಾಮುಖ್ಯತೆ ಇದೆ ಎಂದ್ರೇ ರಕ್ತ ಕಣ್ಣೀರು ಸಿನಿಮಾದ ಡೈರೆಕ್ಟರ್ ಸಾಧು ಕೋಕಿಲಾ ಆದ್ರೆ, ಸಿನಿಮಾದ ಅಷ್ಟು ಡೈಲಾಗ್ ಬರೆದಿದ್ದು ಉಪೇಂದ್ರ ಆ ಸಿನಿಮಾ ಡೈಲಾಗ್ ಮೂಲಕ ಹಿಟ್ ಆಗಿದ್ದು ಮರೆಯೋ ಮಾತಲ್ಲ ಬಿಡಿ.
ಅಂತಹ ಬುದ್ಧಿವಂತನೀಗ ಇಂದು 52 ರ ಹರೆಯದ ಜನ್ಮದಿನ ಸದ್ಯ ಕೊರೊನಾ ಹಾವಳಿ ಪರಿಣಾಮ ಅಭಿಮಾನಗಳ ಆಚರಣೆಯ ಜನ್ಮದಿಂದ ದೂರ ಉಳಿದಿರುವ ಉಪ್ಪಿಗೆ ಇಂದು ಸಾಲು ಸಾಲು ಉಡುಗೂರೆಗಳಿದ್ದು ಸ್ವತಃ ಉಪ್ಪಿ ಹೊಸ ಕಾರು ಖರೀದಿ ಒಂದೇಡೆ ಯಾದ್ರೆ ಅವರು ಅಭಿನಯಿಸುತ್ತಿರುವ ಕಬ್ಜ ಚಿತ್ರದ ಥಿಮ್ ಪೋಸ್ಟರ್ ಈಗಾಗಲೇ ರಾಮಗೋಪಾಲ ವರ್ಮಾ ಬಿಡುಗಡೆ ಮಾಡಿದ್ದು ಕ್ರೇಜಿಸ್ಟಾರ್ ರಿಯಲಸ್ಟಾರ್ ಕಾಂಬಿನೇಷನ್ ಮೊದಲ ಸಿನಿಮಾ ತ್ರಿಶೂಲಂ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಜೊತೆಗೆ ಶಶಾಂಕ್ ನಿರ್ದೇಶನದ ಚಿತ್ರದ ಪೋಸ್ಟರ್ ಬಿಡುಗಡೆ ಸಜ್ಜಾಗಿದೆ. ಕೆ ಮಾದೇಶ್ ನಿರ್ದೇಶನದ ಲಗಾಮ್ ಚಿತ್ರ ಸಹ ಅಧಿಕೃತವಾಗಿ ಘೋಷಣೆಯಾಗಲಿದೆ.
PublicNext
18/09/2020 03:16 pm