ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ರಶ್ಮಿಕಾ ಮದುವೆ ನಂತರ ಡಿವೋರ್ಸ್ ಆಗಬಹುದು: ಭವಿಷ್ಯ ನುಡಿದ ವೇಣು ಸ್ವಾಮಿ

ನಟಿ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಸುಖಮಯ ಆಗಿರುವುದಿಲ್ಲ, ಮದುವೆ ನಂತ್ರ ಡಿವೋರ್ಸ್ ಕೂಡ ಆಗಬಹುದು ಎಂದು ಆಂಧ್ರದ ಖ್ಯಾತ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ವೇಣು ಸ್ವಾಮಿ ನೀಡಿರೋ ಹೇಳಿಕೆ ವೈರಲ್ ಆಗುತ್ತಿದೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಆ ಹೇಳಿಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದೆ. ವೇಣು ಸ್ವಾಮಿ 2 ವರ್ಷಗಳ‌ ಹಿಂದೆಯೇ ಸಮಂತಾ- ನಾಗಚೈತನ್ಯ ಡಿವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದರು. ಪ್ರಭಾಸ್, ನಯನತಾರಾ, ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಸುಖಮಯವಾಗಿರೋದಿಲ್ಲ ಅಂತ ಕೂಡ ಹೇಳಿದ್ದಾರೆ. ಈ ಹಿಂದೆ ಜ್ಯೋತಿಷಿ ವೇಣು ಸ್ವಾಮಿ ರಶ್ಮಿಕಾ ಅವರಿಂದ ತಾರಾ ದೇವಿ ಪೂಜೆ ಮಾಡಿಸಿದ್ದರು, ಆ ಪೂಜೆಯ ನಂತರ ರಶ್ಮಿಕಾಗೆ ಅದೃಷ್ಟ ಬಂತು, ಸಾಕಷ್ಟು ಅವಕಾಶ ಸಿಕ್ತು ಅಂತ ಜ್ಯೋತಿಷಿ ವೇಣು ಸ್ವಾಮಿ ಹೇಳಿಕೊಂಡಿದ್ದಾರೆ. ವೇಣು ಸ್ವಾಮಿ ಅವರಿಂದ ರಶ್ಮಿಕಾ ಪೂಜೆ ಮಾಡಿಸಿದ ಫೋಟೋ, ವೀಡಿಯೋ ವೈರಲ್ ಆಗಿತ್ತು.

Edited By : Nagaraj Tulugeri
PublicNext

PublicNext

08/04/2022 06:13 pm

Cinque Terre

36.81 K

Cinque Terre

2