ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಭಾಸ್ ಬಗ್ಗೆ ಭಯಾನಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!- ಫ್ಯಾನ್ಸ್‌ ಗರಂ

ಹೈದರಾಬಾದ್​: ಪ್ರಖ್ಯಾತ ಸಿನಿಮಾ ಮತ್ತು ರಾಜಕೀಯ ಜ್ಯೋತಿಷಿ ವೇಣು ಸ್ವಾಮಿ ಅವರು ನಟ ಪ್ರಭಾಸ್ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ.

ಆರಂಭದಲ್ಲಿ ಜ್ಯೋತಿಷಿ ವೇಣು ಸ್ವಾಮಿ ಅವರು ನುಡಿಯುತ್ತಿದ್ದ ಭವಿಷ್ಯದ ಬಗ್ಗೆ ಅಷ್ಟಾಗಿ ಜನರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆಯೇ ಮಾಧ್ಯಮ ಸಂದರ್ಶನದಲ್ಲಿ ಸಮಂತಾ ಮತ್ತು ನಾಗಚೈತನ್ಯ ಮದುವೆಯನ್ನು ಪ್ರಸ್ತಾಪಿಸಿ, ಅವರಿಬ್ಬರ ಜಾತಕದ ಪ್ರಕಾರ ಮದುವೆ ನಂತರ ಮನಸ್ತಾಪ ಉಂಟಾಗಿ ಬೇರೆ ಬೇರೆ ಆಗಲಿದ್ದಾರೆ ಎಂದು ಹೇಳಿದ್ದರು. ಅದರಂತೆಯೇ ಸಮಂತಾ-ನಾಗಚೈತನ್ಯ ಬೇರೆಯಾಗಿದ್ದಾರೆ. ಇದರ ಬೆನ್ನಲ್ಲೇ ವೇಣು ಅವರು ನುಡಿದಿದ್ದ ಭವಿಷ್ಯದ ವಿಡಿಯೋ ತುಣುಕು ಇತ್ತೀಚೆಗಷ್ಟೇ ವೈರಲ್​ ಆಗಿತ್ತು.

ಇದೀಗ ವೇಣು ಅವರು ಸೂಪರ್​ಸ್ಟಾರ್​ ಪ್ರಭಾಸ್​ ಬಗ್ಗೆ ನುಡಿದಿರುವ ಭವಿಷ್ಯ ಅವರ ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಪ್ರಭಾಸ್​ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳು ಎದುರಾಗಲಿವೆಯಂತೆ. ಸಾಕಷ್ಟು ಸೋಲುಗಳನ್ನು ಅನುಭವಿಸಲಿದ್ದರಂತೆ. ದೊಡ್ಡ ದೊಡ್ಡ ಫ್ಲಾಪ್​ ಸಿನಿಮಾಗಳು ಪ್ರಭಾಸ್​ ಪಟ್ಟಿಗೆ ಸೇರಲಿದೆ. ಪ್ರಭಾಸ್​ ಸಿನಿಮಾ ಮೇಲೆ ಬಂಡವಾಳ ಹೂಡುವ ಮುನ್ನ ನಿರ್ಮಾಪಕರು ಎರಡೆರಡು ಬಾರಿ ಚಿಂತಿಸುವ ಸಮಯ ಎದುರಾಗಲಿದೆ ಎಂಬ ಭವಿಷ್ಯವನ್ನು ಹೇಳಿದ್ದಾರೆ.

ವೇಣು ಸ್ವಾಮಿ ಅವರು ಭವಿಷ್ಯ ನುಡಿದಿರುವ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಭಾಸ್ ಅಭಿಮಾನಿಗಳು ಈ ಬಗ್ಗೆ ಕಿಡಿಕಾರಿದ್ದಾರೆ.

Edited By : Vijay Kumar
PublicNext

PublicNext

03/04/2022 04:29 pm

Cinque Terre

75.16 K

Cinque Terre

4

ಸಂಬಂಧಿತ ಸುದ್ದಿ