'ಕಂಠಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದ ಯುವ ನಿರ್ದೇಶಕ ಭರತ್ ನಿಧನರಾಗಿದ್ದಾರೆ.
ಭರತ್ ಅವರು ಕಿಡ್ನಿ ವೈಫಲ್ಯದಿಂದ ಕಳೆದ ಒಂದು ವಾರದಿಂದ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ಸಮಯದಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಡಿ.24ರ ರಾತ್ರಿ 11 ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಪತ್ನಿ ಹಾಗೂ ಪುತ್ರಿಯನ್ನು ಭರತ್ ಅಗಲಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ 'ಕಂಠಿ' ಸಿನಿಮಾಗೆ ಭರತ್ ಆ್ಯಕ್ಷನ್ ಕಟ್ ಹೇಳಿದ್ದರು. ರವಿಚಂದ್ರನ್ ಹಿರಿಯ ಪುತ್ರನ ಜೊತೆಯೂ ಸಿನಿಮಾ ಮಾಡಿದ್ದಾರೆ. ಭರತ್ ನಿರ್ದೇಶನದ ಹಿರಿಯ ನಟ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿದ್ದ 'ಸಾಹೇಬ' ಸಿನಿಮಾ 2017ರಲ್ಲಿ ತೆರೆ ಕಂಡಿತ್ತು.
ರಾಮನಗರ ಚಿಕ್ಕಮುಳುವಾಡಿ ಗ್ರಾಮದವರಾಗಿದ್ದ ಭರತ್ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದರು. ಕೊರೊನಾದಿಂದ ಮೃತರಾದವರ ಅಂತಿಮ ಸಂಸ್ಕಾರ ಮಾಡಲು ನಿಗದಿಪಡಿಸಲಾಗಿರುವ ಕೆಂಗೇರಿಯ ಬಿಜೆಎಸ್ ಆಸ್ಪತ್ರೆಯ ಬಳಿ ನಿರ್ದೇಶಕ ಭರತ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
PublicNext
25/12/2020 12:38 pm