ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ಹೊಸ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪಡ್ಡೆ ಹುಲಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ, ಶ್ರೇಯಸ್ ಸದ್ಯ ವಿಷ್ಣು ಪ್ರಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮೊದಲೇ ಶ್ರೇಯಸ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಸ್ಯಾಂಡಲ್ ವುಡ್ ನಿಂದ ಮಾಲಿವುಡ್ ಗೆ ಜಿಗಿದಿದ್ದಾರೆ. ಹೌದು, ಶ್ರೇಯಸ್ ಇದೀಗ ಮಲಯಾಳಂ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಮಾತುಕತೆ ನಡೆದಿದ್ದು, ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಅಂದಹಾಗೆ ಶ್ರೇಯಸ್ ಮೊದಲ ಮಲಯಾಳಂ ಚಿತ್ರಕ್ಕೆ 'ಒರು ಆಡಾರ್ ಲವ್' ಖ್ಯಾತಿಯ ನಿರ್ದೇಶಕ ಓಮರ್ ಲುಲು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ 'ಪವರ್ ಸ್ಟಾರ್' ಎಂದು ಟೈಟಲ್ ಇಡಲಾಗಿದೆ.
ನಿರ್ದೇಶಕ ಓಮರ್, 'ಒರು ಆಡಾರ್ ಲವ್' ಸಿನಿಮಾ ಮೂಲಕ ದೇಶದಾದ್ಯಂತ ಸದ್ದು ಮಾಡಿದ್ದರು. ಅಲ್ಲದೆ ಈ ಸಿನಿಮಾ ಮೂಲಕ ಕಣ್ಸನ್ನೆಯ ಸುಂದರಿ ಪ್ರಿಯ ವಾರಿಯರ್ ಅವರನ್ನು ಪರಿಚಯಿಸಿದ್ದು ಇದೇ ನಿರ್ದೇಶಕ. ಇದೀಗ ಓಮರ್ ಕನ್ನಡದ ನಟ ಶ್ರೇಯಸ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.
PublicNext
24/12/2020 02:38 pm