ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ನಟ ಸೈಫ್ ಅಲಿ ಖಾನ್ ಪುತ್ರ ತೈಮೂರ್‌ಗೆ ಮಾಧ್ಯಮ ಕಂಡ್ರೆ ಅದ್ಯಾಕೋ ವಿಚಿತ್ರ ಕೋಪ. ಇತ್ತೀಚಿನ ಹಲವು ಘಟನೆಯಲ್ಲಿ ಸಾಬೀತಾಗಿದೆ. ಸದ್ಯ ಈ ನಾಲ್ಕರ ಪೋರ ''ನಾಟ್ ಅಲೌಡ್'' ಎಂದು ಗುಡುಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರು ಕರೀನಾ ಕಪೂರ್ ರೋಟೀನ್ ಚೆಕಪ್‌ಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಅಮ್ಮನ ಜೊತೆ ನಡೆದುಕೊಂಡು ಬರುತ್ತಿದ್ದ ತೈಮೂರ್ ಮೀಡಿಯಾ ನೋಡುತ್ತಿದ್ದಂತೆ ನಾಟ್ ಅಲೌಡ್ ಎಂದು ಕಿರುಚಿದ್ದಾನೆ. ಕರೀನಾ ಮುಂದೆ ಹೋದರೂ ಹಿಂದೆ ಉಳಿದು ತೈಮೂರ್ ನಾಟ್ ಅಲೌಡ್ ಎಂದು ಕ್ಯಾಮೆರಾ ಕಡೆ ನೋಡಿ ಗುಡುಗಿದ್ದಾನೆ. ನಂತರ ಕರೀನಾ ಬಲವಂತವಾಗಿ ತೈಮೂರ್ ಕೈಹಿಡಿದು ಒಳಗೆ ಕರೆದೊಯ್ದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
23/12/2020 11:09 pm