ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ನಾನು ಕ್ವಾರಂಟೈನ್‌ನಲ್ಲಿ ಇರುವೆ. ಚೆನ್ನಾಗಿ ವಿಶ್ರಾಂತಿ ಪಡೆಯುತ್ತಿರುವೆ. ಇದರಿಂದ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರಳುವೆ" ಎಂದು ತಿಳಿಸಿದ್ದಾರೆ.
"ನನ್ನನ್ನು ಭೇಟಿಯಾದ ಪ್ರತಿಯೊಬ್ಬರೂ ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸಿಕೊಳ್ಳುವೆ. ಧನ್ಯವಾದಗಳು ಮತ್ತು ದಯವಿಟ್ಟು ಸುರಕ್ಷಿತವಾಗಿರಿ" ಎಂದು ರಕುಲ್ ಪ್ರೀತ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
PublicNext
22/12/2020 04:21 pm