ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಶ್ ಬರ್ತಡೇ ದಿನ ಕೆಜಿಎಫ್-2 ಟೀಸರ್ ರಿಲೀಸ್

ಇಂದು ಬೆಳಗ್ಗೆ 10.08 ಕ್ಕೆ ಕೆಜಿಎಫ್ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ವಿಚಾರವನ್ನು ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್​​ ಚಿತ್ರತಂಡ ಕೊನೆಗೂ ಹೊಸ ವಿಚಾರವೊಂದನ್ನು ರಿವೀಲ್ ಮಾಡಿದ್ದು ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. 21 ಡಿಸೆಂಬರ್ 2018 ರಂದು ಕೆಜಿಎಫ್ ಭಾಗ 1 ಬಿಡುಗಡೆಯಾಗಿತ್ತು.

ಈ ಚಿತ್ರ ಬಿಡುಗಡೆಯಾದ ದಿನದಂದೇ ಚಿತ್ರತಂಡ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ದಿನಾಂಕ ಹಾಗೂ ಸಮಯವನ್ನು ಅನೌನ್ಸ್ ಮಾಡಿದೆ. ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್​​ ಸೀಕ್ವೆಲ್ ಟೀಸರ್ 2021 ಜನವರಿ 8 ಯಶ್ ಹುಟ್ಟುಹಬ್ಬದ ದಿನದಂದು ಬೆಳಗ್ಗೆ 10.18 ಕ್ಕೆ ಬಿಡುಗಡೆಯಾಗಲಿದೆ. ಟೀಸರ್ ಯಾವಾಗ ಬಿಡುಗಡೆಯಾಗಲಿದೆಯೋ ಎಂದು ಕಾಯುತ್ತಿದ್ದ ಯಶ್ ಅಭಿಮಾನಿಗಳು ಈ ಸುದ್ದಿ ಕೇಳಿ ಸಂತೋಷ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

21/12/2020 05:20 pm

Cinque Terre

74.25 K

Cinque Terre

4