ಉಡುಪಿ: ಸ್ಯಾಂಡಲ್‌ವುಡ್ ನಟ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನೆಲದ ಮೇಲೆ ಕುಳಿತು ನಾಗದೇವರ ಪ್ರಸಾದ ಸ್ವೀಕರಿಸಿದ್ದಾರೆ.
ಷಷ್ಠಿಯ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಅವರ ಅಲೆವೂರು ಗ್ರಾಮದ ಮೂಲಮನೆಯಲ್ಲಿ ಪ್ರತಿ ವರ್ಷ ನಾಗ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಇವತ್ತು ಈ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಪಾಲ್ಗೊಂಡರು. ನಾಗ ಬನ ಸಮೀಪ ನೆಲದಲ್ಲಿ ಕುಳಿತು ಷಷ್ಠಿಯ ವಿಶೇಷ ಭೋಜನ ಮಾಡುವ ಸಂಪ್ರದಾಯ ಇದೆ. ನಟ ರಕ್ಷಿತ್ ಶೆಟ್ಟಿ ಕೂಡ ಕುಟುಂಬದವರ ಜೊತೆ ನೆಲದ ಮೇಲೆ ಕುಳಿತು ಊಟ ಮಾಡಿದರು.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿಂಪಲ್ ಸ್ಟಾರ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
20/12/2020 07:15 pm