ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಜೊತೆ 'ಸಲಾರ್' ಸಿನಿಮಾ ಅನೌನ್ಸ್ ಮಾಡಿದ್ದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ ಮತ್ತೊಂದು ಸಿನಿಮಾ ಬಹಿರಂಗಪಡಿಸುವುದಾಗಿ ಟ್ವೀಟ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿತ್ತು. ಮೊದಲೇ ಹೇಳಿದಂತೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬದ ದಿನದಂದೇ ಸಿನಿಮಾ ಹೆಸರನ್ನು ರಿವೀಲ್ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಟೈಟಲ್ 'ಬಘೀರ'. ಈ ಹೆಸರು ಜಂಗಲ್ ಬುಕ್ ಸಿನಿಮಾದ ವಿಶೇಷ ಪಾತ್ರದ ಹೆಸರು. ಅದೇ ಹೆಸರನ್ನು ಶ್ರೀಮುರಳಿ ಮುಂದಿನ ಸಿನಿಮಾಗೆ ಇಟ್ಟಿರುವುದು ಕುತೂಹಲ ಮೂಡಿಸಿದೆ. ವಿಶೇಷವೆಂದರೆ ಬಘೀರ ಸಿನಿಮಾದ ಕಥೆಯನ್ನು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಬರೆದಿದ್ದಾರೆ. ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ.
PublicNext
17/12/2020 02:02 pm