ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸಣ್ಣಿಯ ಇನ್ಸ್ಟಾ ಹ್ಯಾಕ್: ತಾನ್ಯಾ ಹೋಪ್ ಗೆ ಶಾಕ್

ಸೋಷಿಯಲ್ ಮೀಡಿಯಾ ಮೂಲಕ ಜನರ ಸಂಪರ್ಕಿಸುವ ಸೆಲೆಬ್ರಿಟಿಗಳಿಗೆ ದಿನೇ ದಿನೇ ಒಂದಲ್ಲಾ ಒಂದು ರೀತಿಯ ತೊಂದರೆ ಎದುರಾಗುತ್ತಿದೆ. ಒಮ್ಮೆ ಖಾತೆ ಹ್ಯಾಕ್ ಆದರೆ ಮತ್ತೊಮ್ಮೆ ಕೆಟ್ಟ ಕಮೆಂಟ್ ಮೂಲಕ ಮನಸ್ಥಿತಿ ಹಾಳು ಮಾಡುತ್ತಾರೆ ಅದೂ ಇಲ್ಲವಾದರೆ ವಾರಗಟ್ಟಲೆ ತಿಂಗಳುಗಟ್ಟಲೆ ಟ್ರೋಲ್ ಮಾಡುತ್ತಾರೆ.

ಕೆಲ ದಿನಗಳ ಹಿಂದೆ 'ಚಿಂಗಾರಿ' ನಟಿ ದೀಪಿಕಾ ಕಾಮಯ್ಯ ಖಾತೆ, 'ವರದನಾಯಕ' ನಟಿ ವರಲಕ್ಷ್ಮಿ ಖಾತೆ ಹ್ಯಾಕ್ ಮಾಡಲಾಗಿತ್ತು ಈಗ 'ಯಜಮಾನ' ಚಿತ್ರದ ನಟಿ ತಾನ್ಯ ಹೋಪ್ ಇನ್‌ಸ್ಟಾ ಹ್ಯಾಕ್ ಮಾಡಿದ್ದಾರೆ. ಸದ್ಯ ತಾನ್ಯ ಕೆಲವೇ ಗಂಟೆಗಳಲ್ಲಿ ಖಾತೆಯನ್ನು ಹಿಂಪಡೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹ್ಯಾಕ್ ಮಾಡುವುದಕ್ಕೆಂದೇ ಕೆಲವರು ಇರುತ್ತಾರೆ. ಮಾಹಿತಿ ಪಡೆದುಕೊಳ್ಳಲು , ತಮಾಷೆಗೆಂದು ಹೀಗೆ ಹ್ಯಾಕ್ ಮಾಡುವುದುನ್ನು ತುಂಬಾನೇ ಕಾಮನ್ ಮಾಡಿಕೊಂಡಿದ್ದಾರೆ. ಡಿಸೆಂಬರ್ 11 ಸಂಜೆ ತಾನ್ಯಾ ಇನ್‌ಸ್ಟಾಗ್ರಾಂ ಹ್ಯಾಕ್ ಆಗಿದ್ದು ರಾತ್ರಿ ವಿದೇಶಿಯರು ಆಂಗ್ಲ ಭಾಷೆಯಲ್ಲಿ ಲೈವ್ ಚಾಟ್ ಮಾಡುತ್ತಿದ್ದರು. ತಾನ್ಯ ಅಭಿಮಾನಿಗಳು ಮಾಡುತ್ತಿದ್ದ ಕಮೆಂಟ್ ಲೈವ್‌ನಲ್ಲಿ ತೋರಿಸುತ್ತಿರಲಿಲ್ಲ. ಇನ್‌ಸ್ಟಾಗ್ರಾ ಟೆಕ್ನಿಕಲ್ ಟೀಂ ಸಂಪರ್ಕಿಸಿ ತಾನ್ಯ ಖಾತೆ ಹಿಂಪಡೆದಿದ್ದಾರೆ. ಆದರೆ ಅಭಿಮಾನಿಗಳು ಗಮನಿಸಿರುವ ಪ್ರಕಾರ ಕೆಲವೊಂದು ಫೋಟೊ ಹಾಗೂ ವಿಡಿಯೋಗಳು ಡಿಲೀಟ್‌ ಮಾಡಲಾಗಿದೆಯಂತೆ.

Edited By : Nagaraj Tulugeri
PublicNext

PublicNext

12/12/2020 02:41 pm

Cinque Terre

55.94 K

Cinque Terre

0