ಬಾಲಿವುಡ್‌ನ ಪ್ರಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜ ಅವರು ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂಬೈ ನಗರದ ಆಸ್ಪತ್ರೆಯಲ್ಲಿ ರೆಮೋ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಿರ್ದೇಶಕರೂ ಆಗಿರುವ ರೆಮೋ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈಗ ಅವರ ಆರೋಗ್ಯ ಸ್ಥಿರವಾಗಿದೆ, ಅವರ ಜೊತೆ ಪತ್ನಿ ಲಿಜೆಲ್ ಇದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ರೆಮೋ ಅವರು angiography surgery ಒಳಪಟ್ಟಿದ್ದರು.
ಬಾಲಿವುಡ್ ಸನಿಮಾಗಳ ಕೊರಿಯೋಗ್ರಾಫರ್ ಆಗಿದ್ದ ರೆಮೋ 'ಫಾಲ್ತು' ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. 'ಎಬಿಸಿಡಿ: ಎನಿಬಡಿ ಕ್ಯಾನ್ ಡ್ಯಾನ್ಸ್', 'ಎಬಿಸಿಡಿ 2', 'ರೇಸ್ 3', 'ಸ್ಟ್ರೀಟ್ ಡ್ಯಾನ್ಸರ್ ತ್ರಿಡಿ' ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. 'ಸ್ಟ್ರೀಟ್ ಡ್ಯಾನ್ಸರ್ ತ್ರಿಡಿ' ಚಿತ್ರದಲ್ಲಿ ವರುಣ್ ಧವನ್, ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಎಲ್ಲ ಸಿನಿಮಾಗಳು ನೃತ್ಯ ಪ್ರಧಾನ ಸಿನಿಮಾಗಳಾಗಿವೆ.
PublicNext
11/12/2020 07:35 pm