ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಯುಸೇನೆ ಖಡಕ್ ಎಚ್ಚರಿಕೆಗೆ ತಲೆಬಾಗಿದ ಅನಿಲ್ ಕಪೂರ್

ಮುಂಬೈ: ವಾಯುಸೇನೆಯ ಖಡಕ್ ಎಚ್ಚರಿ ಬೆನ್ನಲ್ಲೇ ಬಾಲಿವುಡ್‌ ನಟ ಅನಿಲ್ ಕಪೂರ್ ಕ್ಷಮೆಯಾಚಿಸಿದ್ದಾರೆ.

ಅನಿಲ್ ಕಪೂರ್ ವೆಬ್ ಸೀರಿಸ್ ಒಂದರಲ್ಲಿ ವಾಯುಸೇನಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ದೃಶ್ಯವೊಂದರಲ್ಲಿ ಅವರು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲದೆ ಈ ದೃಶ್ಯವಿರುವ ವಿಡಿಯೋವನ್ನೂ ಟ್ವೀಟ್ ಮಾಡಿದ್ದರು. ಇದನ್ನು ವಾಯುಸೇನೆ ವಿರೋಧಿಸಿತ್ತು.

ಈ ಕುರಿತು ವಾಯುಸೇನೆ ಟ್ವೀಟ್ ಮಾಡಿ, ಈ ವಿಡಿಯೋದಲ್ಲಿ ಭಾರತೀಯ ವಾಯುಸೇನಾ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಯೂನಿಫಾರಂ ಧರಿಸಿದ ಅನಿಲ್ ಕಪೂರ್ ಬಳಸಿದ ಪದಗಳು ಒಪ್ಪಿಕೊಳ್ಳುವಂತಹುದಲ್ಲ. ಇದು ನಮ್ಮ ಸೇನಾಬಲದ ಅಸಲಿ ನಡತೆಯನ್ನು ತೋರಿಸುತ್ತಿಲ್ಲ. ಸೇನೆಗೆ ಸಂಬಂಧಿಸಿದ ಈ ದೃಶ್ಯವನ್ನು ಈ ಕೂಡಲೇ ತೆಗೆಯಬೇಕು ಎಂದು ಎಚ್ಚರಿಕೆ ನೀಡಿತ್ತು.

ವಾಯುಸೇನೆ ಎಚ್ಚರಿಕೆ ಬೆನ್ನಲ್ಲೇ ಅನಿಲ್ ಕಪೂರ್ ಕ್ಷಮೆಯಾಚಿಸಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

09/12/2020 10:49 pm

Cinque Terre

123.7 K

Cinque Terre

5