ಭಾರತೀಯ ಚಿತ್ರರಂಗದಲ್ಲಿ 'ಸಲಾರ್' ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ನಟ ಪ್ರಭಾಸ್ ಅವರಿಗೆ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, ಜನವರಿಯಿಂದ ಶೂಟಿಂಗ್ ಆರಂಭಿಸುವುದಾಗಿ ಚಿತ್ರತಂಡ ಹೇಳಿದೆ.
ಸಲಾರ್ ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾವಾದ ಹಿನ್ನೆಲೆಯಲ್ಲಿ ಬಾಲಿವುಡ್ ಬೆಡಗಿಯರನ್ನು ಚಿತ್ರಕ್ಕೆ ಕರೆ ತರುವ ಯೋಚನೆಯಲ್ಲಿ ಚಿತ್ರತಂಡ ಇದೆ ಎನ್ನಲಾಗಿದೆ. ಚಿತ್ರಕಥೆಯ ಪ್ರಕಾರ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ದಿಶಾ ಪಟಾನಿ ಹಾಗೂ ಸಾರ ಅಲಿ ಖಾನ್ ಅವರನ್ನು ಚಿತ್ರತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
PublicNext
09/12/2020 07:48 pm