ಬೆಂಗಳೂರು: ಬಹು ನಿರೀಕ್ಷಿತ 'ಫ್ಯಾಂಟಮ್' ಕೊನೆ ಹಂತದ ಶೂಟಿಂಗ್ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ.
ಬಹುತೇಕ ಸೆಟ್ನಲ್ಲಿಯೇ ಫ್ಯಾಂಟಮ್ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಕೇರಳದಲ್ಲಿ ಚಿತ್ರದ ಕೊನೇ ಹಂತದ ಶೂಟಿಂಗ್ನಲ್ಲಿ ಸುದೀಪ್ ಭಾಗವಹಿಸಿದ್ದಾರೆ.
ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಫ್ಯಾಂಟಮ್ ಚಿತ್ರದ ಶೂಟಿಂಗ್ಗೆ ಚಾಲನೆ ನೀಡಲಾಗಿತ್ತು. ಇದೀಗ ಬಹುತೇಕ ಚಿತ್ರೀಕರಣ ಮುಗಿಸಿಕೊಂಡು, ಕೊನೇ ಹಂತದ ಶೂಟಿಂಗ್ ಶುರುವಾಗಿದೆ. ಚಿತ್ರದ ಕೊನೆಯ ಭಾಗದ ದೃಶ್ಯವನ್ನು ಸೆರೆಹಿಡಿಯುತ್ತಿದ್ದು, ಇನ್ನೇನು ಶೀಘ್ರದಲ್ಲಿ ತೆರೆ ಕಾಣಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ‘ಫ್ಯಾಂಟಮ್ ಚಿತ್ರದ ಕೊನೇ ಹಂತದ ಶೂಟಿಂಗ್ ಶುರುವಾಗಿದೆ. ಲೊಕೇಷನ್ ಅದ್ಭುತವಾಗಿದೆ. ಅಷ್ಟೇ ಅಚ್ಚುಕಟ್ಟಾಗಿ ಸೆಟ್ ನಿರ್ಮಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
PublicNext
09/12/2020 07:30 pm