ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಇಬ್ಬರಲ್ಲಿ ಯಾರಾಗ್ತಾರೆ​ ‘ಕ್ರಿಷ್ 4’ನಲ್ಲಿ ಹೃತಿಕ್ ಜೋಡಿ?

ಮುಂಬೈ: ಅಭಿಮಾನಿಗಳ ಮನ ಗೆದ್ದ ಹೃತಿಕ್ ರೋಷನ್ ಅಭಿನಯದ 'ಕ್ರಿಷ್' ಸಿನಿಮಾದ ನಾಲ್ಕನೇ ಭಾಗ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೃತಿಕ್ ಅವರ ತಂದೆ ರಾಕೇಶ್​ ರೋಷನ್​ ಕ್ರಿಷ್​ 4 ಚಿತ್ರದ ಸ್ಕ್ರಿಪ್ಟಿಂಗ್​ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ನಡುವೆ ನಾಯಕಿ ಯಾರು ಎಂಬ ಬಗ್ಗೆ ಬಾಲಿವುಡ್​ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಈ ಪೈಕಿ ನಟಿ ಕೃತಿ ಸನೋನ್ ಹೆಸರು ಮೊದಲ ಸ್ಥಾನದಲ್ಲಿದ್ದರೆ, ಕಿಯಾರಾ ಅಡ್ವಾಣಿ ಕೂಡ ರೇಸ್‌ನಲ್ಲಿದ್ದಾರೆ.

ಕೃತಿ ಸನೋನ್ ಮತ್ತು ಹೃತಿಕ್​ ಇಲ್ಲಿಯವರೆಗೂ ಒಟ್ಟಿಗೆ ನಟಿಸಿಲ್ಲ. ಹೀಗಾಗಿ ಈ ಇಬ್ಬರು ನಟಿಯಲ್ಲಿ ಯಾರು ‘ಕ್ರಿಷ್ 4’ನಲ್ಲಿ ಹೃತಿಕ್ ಜೋಡಿ ನಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

Edited By : Vijay Kumar
PublicNext

PublicNext

09/12/2020 07:16 pm

Cinque Terre

43.69 K

Cinque Terre

0

ಸಂಬಂಧಿತ ಸುದ್ದಿ