ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.25ಕ್ಕೆ ಇಂದ್ರಜಿತ್ ನಿರ್ದೇಶನದ ರಿಚಾ ಚಡ್ಡಾ ನಟನೆಯ ಶಕೀಲಾ ಚಿತ್ರ ಬಿಡುಗಡೆ

ಈಗಾಗಲೇ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಶಕೀಲಾ' ಚಿತ್ರದ ಟೇಲರ್ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿರೋದು ನಿಮ್ಗೆಲ್ಲಾ ಗೊತ್ತಿರುವ ವಿಚಾರ‌.

ಸದ್ಯ ನಾವು ಹೇಳ್ತಿರೋದು ಈಗ ಸಿನಿಮಾ ಬಿಡುಗಡೆ ವಿಚಾರ ಹೌದು ! ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಶಕೀಲಾ' ಚಿತ್ರವನ್ನು ಕ್ರಿಸ್ ಮಸ್ ಹಬ್ಬದ ಅಂಗವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ.

ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಭಾಷೆಯಲ್ಲಿ ಶಕೀಲಾ ಸಿನಿಮಾ ಏಕಕಾಲದಲ್ಲಿ ತೆರೆಗೆ ಬರಲಿದೆ.

ಈ ಶಕೀಲಾ ಸಿನಿಮಾದಲ್ಲಿ ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ ನಟಿಸಿದ್ದಾರೆ. ಒಂದು ಕಾಲದಲ್ಲಿ ಸಿನಿಮಾ ವಿತರಕರು, ನಿರ್ಮಾಪಕರು, ಹಾಗೂ ಚಿತ್ರಮಂದಿರಗಳ ಪಾಲಿನ ಬಾಕ್ಸ್ ಆಫೀಸ್ ಕ್ವೀನ್ ಎನಿಸಿಕೊಂಡ ನಟಿ ಶಕೀಲಾ ಕುರಿತಾಗಿ ಮೂಡಿ ಬಂದಿರುವ ಟ್ರೇಲರ್ ಗೆ ನೋಡುಗರು ಖುಷ್ ಆಗಿದ್ದಾರೆ.

90 ರ ದಶಕದ ಹಾಟ್ ನಟಿ ಶಕೀಲಾ ಅವರ ಜೀವನದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ, ಸಿನಿಮಾ ಬದುಕು ನೀಲಿ ಚಿತ್ರಗಳ ಶಕೀಲಾ ಅವರ ಜೀವನವನ್ನ ಆಧರಿಸಿ ಇಂದ್ರಜಿತ್ ಲಂಕೇಶ್ ಶಕೀಲಾ ಟೈಟಲ್ ಒಳಗೆ ಸಿನಿಮಾ ಮಾಡಿದ್ದು 90 ಕಾಲದ ನಟಿಯರ ಬದುಕು ಹೇಗಿತ್ತು.

ಸಿನಿಮಾ ಕ್ಷೇತ್ರಕ್ಕೆ ಅವರು ಹೊಂದಿಕೊಂಡಿದ್ದು ಹೇಗೆ ? ಎಂಬುದನ್ನು ಹೇಳಲು ಹೊರಟಿದ್ದಾರೆ.

ಈ ಸಿನಿಮಾದಲ್ಲಿ ಹಿಂದಿಯ ಪಂಕಜ್ ತ್ರಿಪಾಠಿ, ರಾಜೀವ್ ಪಿಳ್ಳೈ ಮುಂತಾದವರು ಚಿತ್ರದ ಬಹುಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಪೂರ್ಣ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ಶಕೀಲಾ ಸಿನಿಮಾ ಪ್ರೇಕ್ಷಕರ ಕುತೂಹಲ ಕೆರಳಿಸಿದ್ದು 25ಕ್ಕೆ ಆ ಕುತೂಹಲಕ್ಕೆ ಉತ್ತರ ದೊರೆಯಲಿದೆ.

Edited By : Nirmala Aralikatti
PublicNext

PublicNext

08/12/2020 05:27 pm

Cinque Terre

42.94 K

Cinque Terre

0