ಹೊಸ ವರ್ಷದಿಂದ ಸ್ಟಾರ್ ಸಿನಿಮಾಗಳ ಅಬ್ಬರ ಶುರುವಾಗಲಿದ್ದು, ಮೊದಲು ಯಾವ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತದೆ ಎಂಬ ಕುತೂಹಲ ಅನೇಕರಿಗಿದೆ. ಈಗಾಗಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಜನವರಿ ಮೊದಲ ವಾರ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಈ ಬೆನ್ನಲ್ಲೇ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜನವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಚಿತ್ರರಂಗದ ಮೂಲಗಳ ಪ್ರಕಾರ, ಯುವರತ್ನ ಚಿತ್ರವು ಜನವರಿ 22ರಂದು ತೆರೆಗೆ ಬರಲಿದೆ. ಈ ಮೂಲಕ ಅಭಿಮಾನಿಗಳಿಗೆ ಪುನೀತ್ ಬೆಳ್ಳಿತೆರೆ ಮೇಲೆ ದರ್ಶನ ನೀಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ 'ಯುವರತ್ನ' ಚಿತ್ರದ “ಪವರ್ ಆಫ್ ಯೂತ್’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.
PublicNext
07/12/2020 03:28 pm