ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊನಿಡೆಲ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 'ಫಿದಾ' ಸಿನಿಮಾ ಖ್ಯಾತಿಯ ನಟ ವರುಣ್ ತೇಜ್ ಅವರ ಸಹೋದರಿ ಆಗಿರುವ ನಿಹಾರಿಕಾ, ಮನೆಯಲ್ಲಿ ಈಗಾಗಲೇ ಮದುವೆ ಸಂಭ್ರಮ, ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿವೆ. ಹಳದಿ ಶಾಸ್ತ್ರ ಕೂಡ ನೆರವೇರಿದೆ. ವಿಧ ವಿಧವಾದ ಹೂವುಗಳಿಂದ ನಿಹಾರಿಕಾ ಮನೆಯ ಸಿಂಗಾರ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಕುಟುಂಬಸ್ಥರು, ನಿಹಾರಿಕಾ ಸ್ನೇಹಿತರು ಭಾಗಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆಗೆ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
PublicNext
06/12/2020 10:29 pm