ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ 'ಆದಿಪುರುಷ್' ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಓಂ ರಾವತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಬಗ್ಗೆ ಸೈಫ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
'ಲಕ್ಷ್ಮಣನು ಶೂರ್ಪನಕಿಯ ಮೂಗು ಕತ್ತರಿಸಿದಕ್ಕಾಗಿ ಪ್ರತಿಕಾರ ತೀರಿಸಿಕೊಳ್ಳು ರಾವಣನು ಸೀತೆಯನ್ನು ಅಪರಿಸಿದ್ದ. ಇದಕ್ಕೆ ರಾಮನ ವಿರುದ್ಧ ಯುದ್ಧ ಮಾಡಿದ್ದ ಎಂಬುದನ್ನು ಈ ಸಿನಿಮಾ ಸಮರ್ಥಿಸುತ್ತಿದೆ. ರಾವಣನಾಗಿ ನಟಿಸಲು ಉತ್ಸುಕನಾಗಿದ್ದೇನೆ. ಆ ಪಾತ್ರ ನಿರ್ವಹಣೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಮನರಂಜನೆ ದೃಷ್ಟಿಯಿಂದ ಆ ಪಾತ್ರಕ್ಕೆ ನಾವು ಮಾನವೀಯ ಗುಣಗಳನ್ನು ಅಳವಡಿಸುತ್ತಿದ್ದೇವೆ' ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.
ಈ ಬಗ್ಗೆ ಅಸಮಾಧಾನ ಹೊರ ಹಾಕಿರು ನೆಟ್ಟಿಗರು, 'ಸೈಫ್ ಅಲ್ ಖಾನ್ ಅವರು ರಾವಣನು ಸೀತೆ ಅಪಹರಣ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ರಾವಣನೇ ಹೀರೋ ಎನ್ನುವ ರೀತಿಯಲ್ಲಿ ಸೈಫ್ ಮಾತನಾಡಿದ್ದಾರೆ. ಇಲ್ಲಿ ರಾಮಾಯಣವನ್ನು ತಿರುಚಲಾಗಿದೆ' ಎಂದು ಕಿಡಿಕಾರಿದ್ದಾರೆ.
PublicNext
06/12/2020 01:43 pm