ಕೊರೊನಾ ವೈರಸ್ ಹಾವಳಿ ಶುರುವಾಗಿದ್ದೆ ತಡ, ಲಾಕ್ ಡೌನ್ ಘೋಷಣೆಯಾಗಿ ನಾವು ನೀವೆಲ್ಲಾ ಅನುಭವಿಸಿದ ತಾಪತ್ರಯಗಳು ಅಬ್ಬಾ ! ಆ ಗೋಡವೆ ನೆನಪಿಸುವುದೆ ಬೇಡಾ ಬಿಡಿ. ಅಷ್ಟರ ಮಟ್ಟಿಗೆ ಸಮಸ್ಯೆ ಎದುರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದ್ರೇ ಈ ಚಂದನವದಲ್ಲಿ ಈ ಲಾಕ್ ಡೌನ್ ಒಳಗೆ ಹತ್ತಾರು ಸಿನಿಮಾ ಕಥೆಗಳು ಹುಟ್ಟಿಕೊಂಡಿವೆ ನೋಡಿ. ಆ ಸಾಲಿನಲ್ಲಿ "ಲವ್ ಇನ್ ಲಾಕ್ ಡೌನ್" ಎಂಬ ಸಿನಿಮಾ ಸಹ ಸದ್ದಿಲ್ಲದೆ ತಯಾರಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ನಡೆದ ದುರಂತ ಪ್ರೇಮಕಥೆಯನ್ನು ಪ್ರೇಕ್ಷಕನ ಮುಂದೆ ಬಿಚ್ಚಿಡುವ ಸಿನಿಮಾ ಇದಾಗಿದೆ.
ಮಂಜುನಾಥ್ ಬಿ.ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಎಂ. ನಾರಾಯಾಣಸ್ವಾಮಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾ ಬಗ್ಗೆ ನಿರ್ದೇಶಕರು ತಾವು ಕಣ್ಣಾರೆ ಕಂಡ ಪ್ರೇಮಕತೆ ಹಾಗೂ ಕಥೆಯ ದುರಂತದ ಅಂತ್ಯವನ್ನು ಸಿನಿಮಾ ರೂಪಕ್ಕೆ ತಂದಿದ್ದಾರಂತೆ.
ಇತ್ತಿಚೆಗೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು ಅದೇ ದಿನ ನಾ ಕನ್ನಡಿಗನೆಂದುಕೊಂಡು ಬಾಳು ಮಗಾ ಗೀತೆಯನ್ನ ಶೂಟಿಂಗ್ ಸಹ ಮಾಡಲಾಗಿದೆ.
ಚಂದನವದ ಲೆಕ್ಕಾಚಾರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಯಶಸ್ವಿ ಈ ಸಿನಿಮಾಕೆ ನಾಯಕಿಯಾಗಿದ್ದಾರೆ.
ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ಧನ್, ಗಣೇಶರಾವ್, ಬಲರಾಮ್ ಪಂಚಾಲ, ಪಲ್ಲವಿ ರಾಜೇಂದ್ರ ನಟಿಸುತ್ತಿದ್ದಾರೆ. ಲವ್ ಇನ್ ಲಾಕ್ ಡೌನ್ ಸಿನಿಮಾಕೆ ರಮೇಶ್ ಕೊಯಿರಾ ಛಾಯಾಗ್ರಹಣವಿದ್ದು, ಡ್ಯಾನಿಯಲ್ ಅವರ ಸಂಗೀತ ನಿರ್ದೇಶನ ಇರಲಿದೆ.
PublicNext
04/12/2020 11:59 am