ಬೆಂಗಳೂರು: ಖ್ಯಾತ ನಟಿಯರಾದ ಸಮಂತಾ, ಕಾಜಲ್ ಹಾಗೂ ರಾಕುಲ್ ಪ್ರೀತ್ ಮಾಲ್ಡೀವ್ಸ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಬಹುಭಾಷಾ ನಟಿ ವೇದಿಕಾ ಕುಮಾರ್ ಸಹ ಮಾಲ್ಡೀವ್ಸ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದು, ಸಖತ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹಾರ್ಟ್ ಬ್ರೇಕ್ ಮಾಡಿದ್ದಾರೆ.
ವೇದಿಕಾ ಬಹುಭಾಷಾ ನಟಿಯಾಗಿದ್ದು, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ 'ಶಿವಲಿಂಗ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಬಿಕನಿ ತೊಟ್ಟ ವೇದಿಕಾ ಮಾಲ್ಡೀವ್ಸ್‌ನ ಕಡಲ ಕಿನಾರೆಯಲ್ಲಿ ಸೂರ್ಯನ ಕಿರಣಗಳಿಗೆ ಮೈವೊಡ್ಡಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಅವು ಸದ್ಯ ವೈರಲ್ ಆಗಿವೆ.
PublicNext
01/12/2020 05:01 pm