ಕರುನಾಡಿನ ಸಾಹಸ ಸಿಂಹ ಡಾ ವಿಷ್ಣುವರ್ಧನ್ ನಟಿಸಿದ್ದ 'ಯಜಮಾನ' ಚಿತ್ರ ತೆರೆಕಂಡು ಇಂದಿಗೆ 20 ವರ್ಷ ಕಳೆದಿದೆ. ಒಂದು ಕುಟುಂಬ ಅಂತಿದ್ರೆ ಹೀಗಿರಬೇಕು. ಅದೇನು ಅನ್ಯೋನ್ಯತೆ? ಅದೇನು ಧನ್ಯತಾ ಭಾವ? ಅದೇನು ಹೊಂದಾಣಿಕೆ? ಇಂತಹ ಎಲ್ಲ ಗುಣಗಾನಗಳು ಆ ಸಿನೆಮಾ ನೋಡಿದ ಪ್ರತಿಯೊಬ್ಬ ಕನ್ನಡಿಗರ ಬಾಯಿಂದ ಕೇಳಿ ಬಂದಿದ್ದವು. ಕನ್ನಡ ಚಿತ್ರರಂಗದಲ್ಲಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದ್ದ ಈ ಸಿನಿಮಾ ಇಂದಿಗೂ ಸಾರ್ವಕಾಲಿಕ ಹಿಟ್ ಸಿನೆಮಾ. ತಮಿಳಿನ ರೀಮೇಕ್ ಆಗಿದ್ದರೂ ಮೂಲ ಭಾಷೆಗಿಂತ ಕನ್ನಡದಲ್ಲಿಯೇ ದೊಡ್ಡ ಹಿಟ್ ಆಗಿತ್ತು. ಆಮಟ್ಟಕ್ಕೆ ಕನ್ನಡಿಗರು ಈ ಚಿತ್ರವನ್ನು ಗೆಲ್ಲಿಸಿದರು. 20 ವರ್ಷಗಳ ಹಿಂದೆ ಅಂದ್ರೆ 2000ನೇ ಇಸವಿಯಲ್ಲಿ ಡಿಸೆಂಬರ್ 1 ರಂದು ಯಜಮಾನ ಸಿನಿಮಾ ತೆರೆಕಂಡಿತ್ತು. ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಈ ಚಿತ್ರ ಅಂದಿನ ಸಮಯಕ್ಕೆ ಹೆಚ್ಚು ಕಾಲ ಪ್ರದರ್ಶನ ಕಂಡ ವಿಷ್ಣುವರ್ಧನ್ ಸಿನಿಮಾ ಆಗಿತ್ತು. ವಿಶೇಷ ಅಂದ್ರೆ ಯಜಮಾನ ಸಿನಿಮಾ ನೋಡಿ ಸ್ವತಃ ಅಣ್ಣಾವ್ರು ಭಾವುಕರಾಗಿದ್ದರು ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ತಮಿಳಿನಲ್ಲಿ ವಿಜಯ್‌ಕಾಂತ್ ನಟಿಸಿದ್ದ ವಾನತೈಪೊಲೆ ಸಿನಿಮಾ ರೀಮೇಕ್ ಇದು. ಕನ್ನಡದಲ್ಲಿ ಡಾ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದರು. ಶಶಿಕುಮಾರ್, ಅಭಿಜಿತ್ ವಿಷ್ಣು ತಮ್ಮಂದಿರಾಗಿ ಅಭಿನಯಿಸಿದರು. ಪ್ರೇಮಾ ನಾಯಕಿಯಾಗಿದ್ದರು. ರಾಧಾ ಭಾರತಿ ಮತ್ತು ಆರ್ ಶೇಷಾದ್ರಿ ಈ ಚಿತ್ರ ನಿರ್ದೇಶಿಸಿದ್ದರು. ಕೆ.ಮುಸ್ತಫಾ ಮತ್ತು ಮೆಹರುನ್ನೀಸಾ, ರೆಹಮಾನ್ ನಿರ್ಮಿಸಿದ್ದರು. ಡಿಸೆಂಬರ್ 1, 2000ರಲ್ಲಿ ಚಿತ್ರಮಂದಿರದಲ್ಲಿ ಸಿಂಹ ಘರ್ಜನೆ ಆರಂಭವಾಗಿತ್ತು.
ತಮಿಳಿನಲ್ಲಿ ವಿಜಯ್‌ಕಾಂತ್ ನಟಿಸಿದ್ದ ವಾನತೈಪೊಲೆ ಸಿನಿಮಾ ರೀಮೇಕ್ ಇದು. ಕನ್ನಡದಲ್ಲಿ ಡಾ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದರು. ಶಶಿಕುಮಾರ್, ಅಭಿಜಿತ್ ವಿಷ್ಣು ತಮ್ಮಂದಿರಾಗಿ ಅಭಿನಯಿಸಿದರು. ಪ್ರೇಮಾ ನಾಯಕಿಯಾಗಿದ್ದರು. ರಾಧಾ ಭಾರತಿ ಮತ್ತು ಆರ್ ಶೇಷಾದ್ರಿ ಈ ಚಿತ್ರ ನಿರ್ದೇಶಿಸಿದ್ದರು. ಕೆ.ಮುಸ್ತಫಾ ಮತ್ತು ಮೆಹರುನ್ನೀಸಾ, ರೆಹಮಾನ್ ನಿರ್ಮಿಸಿದ್ದರು.
PublicNext
01/12/2020 04:04 pm