ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಟಾರ್ ನಟರ ಚಿತ್ರ ರಿಲೀಸ್ ಆಗೋದು ಯಾವಾಗ?

ಕೋವಿಡ್ ಕಾಲದ ನಡುವೆಯೂ ಕಳೆದ ವಾರ ಥಿಯೇಟರ್ ಗಳಲ್ಲಿ ಹೊಸ ಸಿನಿಮಾ ಬಿಡುಗಡೆಯಾಗಿದೆ. ಆ ನಂತರದ ಬೆಳವಣಿಗೆಗಳ ಮೇಲೆ ಇಡೀ ಸ್ಯಾಂಡಲ್‌ವುಡ್‌ ಸಾಕಷ್ಟು ಭರವಸೆ ಇಟ್ಟಿತ್ತು. ಮಲ್ಟಿಪ್ಲೆಕ್ಸ್‌ಗಳು ಸುಧಾರಿಸಿಕೊಂಡಿದ್ದರೂ ಸಿಂಗಲ್‌ ಥಿಯೇಟರ್‌ಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರ್ತಾರಾ? ಎಂಬ ಕುತೂಹಲವಿತ್ತು. ಈ ಫಲಿತಾಂಶದ ಮೇಲೆ ಇತರ ಸಿನಿಮಾಗಳ ರಿಲೀಸ್‌ ನಿರ್ಧಾರವೂ ಅವಲಂಬಿತವಾಗಿತ್ತು. ಆದರೆ ಈ ಕಾತರಕ್ಕೆ ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದ ಕೆಲವೆಡೆ ಮಾತ್ರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದರೆ ಉತ್ತರ ಕರ್ನಾಟಕದಲ್ಲಿ ನಿರಾಶಾದಾಯಕವಾಗಿದೆ. ಕಳೆದ ವಾರ ಬಿಡುಗಡೆಯಾಗಿರುವ ಮಂಸೋರೆ ನಿರ್ದೇಶನದ ಹೊಸ ಚಿತ್ರ 'ಆ್ಯಕ್ಟ್‌ 1978' ಬಗ್ಗೆ ಸ್ಟಾರ್‌ ನಟರೂ ಸೇರಿದಂತೆ ನೋಡಿದವರೆಲ್ಲ ಅಪಾರ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ, ದೊಡ್ಡ ಮಟ್ಟದಲ್ಲಿ ಜನರು ಚಿತ್ರಮಂದಿರಕ್ಕೆ ಬರಲು ಇನ್ನೂ ಸಿದ್ಧರಾಗಿಲ್ಲ ಎಂಬುದು ಈ ಮೂಲಕ ಕಂಡುಬಂದಿದೆ. ಆದ್ದರಿಂದ ನಿರ್ಮಾಪಕರು ಮತ್ತು ಪ್ರದರ್ಶಕರು ಹೊಸ ಸಿನಿಮಾ ಬಿಡುಗಡೆಯ ಬಗ್ಗೆ ಈಗಲೂ ಗೊಂದಲದಲ್ಲೇ ಇದ್ದಾರೆ.

ಸ್ಟಾರ್‌ ನಟರ ಸಿನಿಮಾ ಹೊರತುಪಡಿಸಿ ಇತರ ಸಿನಿಮಾಗಳಿಗೆ ಪ್ರೇಕ್ಷಕರ ಸಂಖ್ಯೆ ಹಿಂದೆಯೂ ದೊಡ್ಡ ಮಟ್ಟದಲ್ಲಿಇರಲಿಲ್ಲ. ಆ ದೃಷ್ಟಿಯಿಂದ ನೋಡಿದಾಗ ಕಳೆದ ವಾರ ರಿಲೀಸ್‌ ಆದ 'ಆ್ಯಕ್ಟ್‌ 1978' ಚಿತ್ರಕ್ಕೆ ಹಿಂದೆಂದಿಗಿಂತಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌. 'ಈ ರೀತಿಯ ಸಿನಿಮಾಗಳಿಗೆ ಕನ್ನಡ ಪ್ರೇಕ್ಷಕರ ಸಂಖ್ಯೆ ಯಾವಾಗಲೂ ಕಡಿಮೆಯೇ. ಹೀಗಿದ್ದೂ ಈ ಚಿತ್ರ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ ಎನ್ನಬಹುದು.

Edited By : Nagaraj Tulugeri
PublicNext

PublicNext

27/11/2020 01:12 pm

Cinque Terre

60.75 K

Cinque Terre

0

ಸಂಬಂಧಿತ ಸುದ್ದಿ