ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಫ್ಯಾಂಟಮ್' ಪ್ರಪಂಚದಲ್ಲಿ ಕಿಚ್ಚ : ಗಮನಸೆಳೆಯುತ್ತಿದೆ ಹುರಿಗೊಳಿಸಿದ ಬೆನ್ನಿನ ಚಿತ್ರ

ಬೆಂಗಳೂರು: ಒಂದೊಂದು ಚಿತ್ರಕ್ಕಾಗಿ ಒಂದೊಂದು ಗೆಟಪ್ ನಲ್ಲಿ ಕಂಗೊಳಿಸುವ ಸ್ಟಾರ್ ನಟರು ಅಭಿಮಾನಿಗಳ ಮನ ಗೆಲ್ಲುತ್ತಾರೆ.

ಸದ್ಯ 'ಫ್ಯಾಂಟಮ್' ಪ್ರಪಂಚದಲ್ಲಿ ತೇಲುತ್ತಿರುವ ಕಿಚ್ಚ ಸುದೀಪ ತಮ್ಮ ಕಟ್ಟು ಮಸ್ತಾದ ಬಾಡಿ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಅದರಲ್ಲಿನ ಒಂದು ಝಲಕ್ ಹಂಚಿಕೊಂಡಿದ್ದಾರೆ ಸುದೀಪ್.

ಸಿನಿಮಾದ ಕ್ಲೈಮ್ಯಾಕ್ಸ್ ಗಾಗಿ ಕಳೆದ ಒಂದು ತಿಂಗಳಿಂದ ಎಲ್ಲರೂ ದಣಿದಿರುವ ಬಗ್ಗೆ ಹೇಳಿಕೊಂಡಿರುವ ಕಿಚ್ಚ.

ಈ ಮಧ್ಯೆ ತಮ್ಮ ಕಟ್ಟುಮಸ್ತಾದ ದೇಹ, ಅದರಲ್ಲೂ ಹುರಿಗೊಳಿಸಿದ ಬೆನ್ನಿನ ಗಮನ ಸೆಳೆಯುವ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಸುದೀಪ್, ಬಹಳ ದಿನಗಳ ಬಳಿಕ ವರ್ಕ್ ಔಟ್ ಆರಂಭಿಸಿರುವ ಕುರಿತೂ ಹೇಳಿಕೊಂಡಿದ್ದಾರೆ.

ಒಳ್ಳೇ ಫುಡ್ಡು, ಡೀಸೆಂಟ್ ಲೈಫ್ ಸ್ಟೈಲ್, ಸ್ವಲ್ಪ ಶಿಸ್ತು.. ಕೊನೆಗೂ ಕೆಟ್ಟದ್ದೇನೂ ಆಗಿಲ್ಲ ಎಂದಿರುವ ಅವರು, ಸಿನಿಮಾಗಾಗಿ ಹುರಿಗೊಳಿಸಿರುವ ತಮ್ಮ ಮೈಯನ್ನು ಪ್ರದರ್ಶಿಸಿದ್ದಾರೆ.

Edited By : Nirmala Aralikatti
PublicNext

PublicNext

26/11/2020 10:02 pm

Cinque Terre

41.4 K

Cinque Terre

2